‘ಪ್ರಕೃತಿ ವಿಕೋಪದಲ್ಲಿ ನೂರಾರು ಜನ ಸಾಯ್ತಾರೆ, ಯಾರಿಗೆ ಶಿಕ್ಷೆ ಸಿಗುತ್ತೆ?’: ದರ್ಶನ್ ಪರ ನಿರ್ಮಾಪಕನ ಬ್ಯಾಟಿಂಗ್
‘ಮಾರಕಾಸ್ತ್ರ’ ಸಿನಿಮಾದ ನಿರ್ಮಾಪಕ ನಟರಾಜ ಅವರು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಒಂದು ತಪ್ಪು ಆಗಿರಬಹುದು. ಆದರೆ ದರ್ಶನ್ ಮಾಡಿರುವ ಒಳ್ಳೆಯ ಕೆಲಸಗಳನ್ನು ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ. ದರ್ಶನ್ ಬಂಧನದ ಬಳಿಕ ಸಿನಿಮಾ ಕೆಲಸಗಳು ಅರ್ಥಕ್ಕೆ ನಿಂತಿವೆ. ಅದರಿಂದ ತುಂಬ ಜನರಿಗೆ ತೊಂದರೆ ಆಗುತ್ತಿದೆ ಎಂದು ನಟರಾಜ ಹೇಳಿದ್ದಾರೆ.
ನಟ ದರ್ಶನ್ ಮೇಲಿರುವ ಕೊಲೆ ಆರೋಪದ ಬಗ್ಗೆ ಈಗಾಗಲೇ ಅನೇಕರು ಪ್ರತಿಕ್ರಿಯಿಸಿದ್ದಾರೆ. ರೇಣುಕಾ ಸ್ವಾಮಿ ತಪ್ಪು ಮಾಡಿದ್ದರಿಂದಲೇ ಇದೆಲ್ಲ ನಡೆಯಿತು ಎಂದು ಫ್ಯಾನ್ಸ್ ವಾದ ಮಾಡುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಈ ವಿಚಾರದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈಗ ‘ಮಾರಕಾಸ್ತ್ರ’ ಸಿನಿಮಾದ ನಿರ್ಮಾಪಕ ನಟರಾಜ ಅವರು ದರ್ಶನ್ ಬಗ್ಗೆ ಮಾತನಾಡಿದ್ದಾರೆ. ‘ದರ್ಶನ್ ಅವರನ್ನು ಭೇಟಿ ಆದಾಗ ನಮಗೆ ಮಗುವಿನ ರೀತಿ ಫೀಲ್ ಆಗಿತ್ತು. ಈಗ ತಪ್ಪು ಮಾಡಿದ್ದಾರೆ ಎಂದರೆ ನಂಬೋಕೆ ಆಗಲ್ಲ. ರೇಣುಕಾ ಸ್ವಾಮಿ ಈಗ ಮತ್ತೆ ಹುಟ್ಟಿಬರೋಕೆ ಆಗಲ್ಲ. ದರ್ಶನ್ ಬಂಧನದಿಂದ ಎಲ್ಲರಿಗೂ ತೊಂದರೆ ಆಗುತ್ತಿದೆ. ಒಳ್ಳೆಯತನಕ್ಕೆ ಶಿಕ್ಷೆ ಕಡಿಮೆ ಮಾಡಿದ ಉದಾಹರಣೆ ಇದೆ. ದರ್ಶನ್ ಒಂದು ತಪ್ಪು ಮಾಡಿರಬಹುದು. ಆದರೆ ಸಾವಿರಾರು ಒಳ್ಳೆಯ ಕೆಲಸ ಮಾಡಿದ್ದಾರೆ. ಅದನ್ನು ಪರಿಗಣಿಸಿ ಕರುಣೆ ತೋರಿಸಬೇಕು. ದರ್ಶನ್ ಅವರನ್ನು ನಂಬಿಕೊಂಡ ಚಿತ್ರರಂಗಕ್ಕೆ ಅನುಕೂಲ ಆಗುತ್ತದೆ. ತಪ್ಪಾಗಿರುವುದು ಒಂದು ಅಪಘಾತದ ರೀತಿ. ಪ್ರಕೃತಿ ವಿಕೋಪ ಆದಾಗ ನೂರಾರು ಜನರು ಸಾಯುತ್ತಾರೆ. ಅದಕ್ಕೆ ಯಾರಿಗೆ ಶಿಕ್ಷೆ ಆಗುತ್ತೆ? ರೇಣುಕಾಸ್ವಾಮಿ ಕೂಡ ತಪ್ಪು ಮಾಡಬಾರದಿತ್ತು. ಅವರು ತಪ್ಪು ಮಾಡದೇ ಇದ್ದಿದ್ದರೆ ಇದೆಲ್ಲ ನಡೆಯುತ್ತಲೇ ಇರಲಿಲ್ಲ’ ಎಂದು ನಿರ್ಮಾಪಕ ನಟರಾಜ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.