Sign In

By signing in or creating an account, you agree with Associated Broadcasting Company's Terms & Conditions and Privacy Policy.

MTB’s shocker to Congress: ಹೊಸಕೋಟೆ ಮೂಲ ಕಾಂಗ್ರೆಸ್ಸಿಗರ ಎಚ್ಚರಿಕೆಯನ್ನು ಹಗುರವಾಗಿ ಪರಿಗಣಿಸಿದ ವರಿಷ್ಠರು, ನೂರಾರು ನಾಯಕರು ಬಿಜೆಪಿ ಸೇರ್ಪಡೆ!

MTB’s shocker to Congress: ಹೊಸಕೋಟೆ ಮೂಲ ಕಾಂಗ್ರೆಸ್ಸಿಗರ ಎಚ್ಚರಿಕೆಯನ್ನು ಹಗುರವಾಗಿ ಪರಿಗಣಿಸಿದ ವರಿಷ್ಠರು, ನೂರಾರು ನಾಯಕರು ಬಿಜೆಪಿ ಸೇರ್ಪಡೆ!

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 14, 2023 | 12:37 PM

ಹಾಗಾಗಿ, ಹೊಸಕೇಟೆಯ ಕಾಂಗ್ರೆಸ್ ನಾಯಕರು ಮಂಗಳವಾರದಂದು ನಾಗರಾಜ್ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಮುಸ್ಲಿಂ ಸಮುದಾಯದ ಹಲವಾರು ಮಹಿಳೆಯರು ಸಹ ಇಂದು ಬಿಜೆಪಿ ಸೇರಿದ್ದು ಗಮನಾರ್ಹ ಸಂಗತಿ.

ದೇವನಹಳ್ಳಿ: ಹೊಸಕೋಟೆ (Hoskote) ತಾಲ್ಲೂಕಿನ ಮೂಲ ಕಾಂಗ್ರೆಸ್ಸಿಗರು ಪಕ್ಷದ ತಾರತಮ್ಯ ಧೋರಣೆ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಬಗ್ಗೆ ನಾವು ಈಗಾಗಲೇ ವರದಿ ಮಾಡಿದ್ದೇವೆ. ತಮ್ಮ ಜೊತೆ ಪಕ್ಷದ ವರಿಷ್ಠರು (party seniors) ಮಾತುಕತೆ ನಡೆಸದಿದ್ದರೆ ಫೆಬ್ರುವರಿ 14 ರಂದು ಸಚಿವ ಎಮ್ ಟಿ ಬಿ ನಾಗರಾಜ್ (MTB Nagaraj) ಸಮ್ಮುಖದಲ್ಲಿ ಬಿಜೆಪಿ ಸೇರುವುದಾಗಿ ಅಸಂತೃಪ್ತ ನಾಯಕರು ಗಡುವನ್ನು ಸಹ ನೀಡಿದ್ದರು. ಕಾಂಗ್ರೆಸ್ ನಾಯಕರು ಇವರ ಎಚ್ಚರಿಕೆಯನ್ನು ಹಗುರವಾಗಿ ಪರಿಗಣಿಸಿದಂತೆ ಕಾಣುತ್ತದೆ. ಹಾಗಾಗಿ, ಹೊಸಕೋಟೆಯ ಕಾಂಗ್ರೆಸ್ ನಾಯಕರು ಮಂಗಳವಾರದಂದು ನಾಗರಾಜ್ ಸಮ್ಮುಖದಲ್ಲಿ ಬಿಜೆಪಿ ಸೇರಿದರು. ಮುಸ್ಲಿಂ ಸಮುದಾಯದ ಹಲವಾರು ಮಹಿಳೆಯರು ಸಹ ಇಂದು ಬಿಜೆಪಿ ಸೇರಿದ್ದು ಗಮನಾರ್ಹ ಸಂಗತಿ.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 14, 2023 12:28 PM