ಕರಪತ್ರ ಅಭಿಯಾನ ಬಳಿಕ, ಪೋಸ್ಟರ್ ಅಭಿಯಾನ: ಕೋಲಾರದಲ್ಲಿ ಮುನ್ನಲೆಗೆ ಬಂದ ದಲಿತ ಸಿಎಂ ಕೂಗು

ಕರಪತ್ರ ಅಭಿಯಾನ ಬಳಿಕ, ಪೋಸ್ಟರ್ ಅಭಿಯಾನ: ಕೋಲಾರದಲ್ಲಿ ಮುನ್ನಲೆಗೆ ಬಂದ ದಲಿತ ಸಿಎಂ ಕೂಗು

TV9 Web
| Updated By: ವಿವೇಕ ಬಿರಾದಾರ

Updated on: Feb 13, 2023 | 12:38 PM

ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಪ್ರವಾಸದಲ್ಲಿದ್ದು, ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಿದೆ.

ಕೋಲಾರ: ವಿಪಕ್ಷ ನಾಯಕ ಸಿದ್ದರಾಮಯ್ಯ ತಾವು ಸ್ಪರ್ಧಿಸುವ ಕ್ಷೇತ್ರ ಕೋಲಾರ ಪ್ರವಾಸದಲ್ಲಿದ್ದಾರೆ. ಈ ಹಿನ್ನೆಲೆ ಕೋಲಾರದಲ್ಲಿ ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಿದೆ. ಕೋಲಾರ ನಗರದಲ್ಲಿ ದಲಿತ ಮುಖಂಡ ನಾರಾಯಣಸ್ವಾಮಿ ಪೋಸ್ಟರ್ ಅಭಿಯಾನ ಶುರು ಮಾಡಿದ್ದು, ಮತದಾರರ ಕೂಗು ದಲಿತ ಮುಖ್ಯಮಂತ್ರಿ ಕಡೆಗೆ ಅನ್ನುವ ಪೋಸ್ಟರ್​​ಗಳನ್ನು ಅಂಟಿಸುತ್ತಿದ್ದಾರೆ. ಈ ರಾಜ್ಯಕ್ಕೆ ದಲಿತ ಮುಖ್ಯಮಂತ್ರಿ ಬೇಕು. ಬೋಲೋರೆ ಬೋಲೋ, ಜೋರ್ಸೇ ಬೋಲೋ, ಪ್ಯಾರ್ಸೆ ಬೋಲೋ, ದಲಿತ ಮುಖ್ಯಮಂತ್ರಿ ಕೂ ಜೈ ಬೋಲೋ, ಹೀಗೆ ನಗರದೆಲ್ಲೆಡೆ ಪೋಸ್ಟರ್​​ಗಳನ್ನ ಹಾಕಿ ಅಭಿಯಾನ ಮಾಡಲಾಗಿದೆ.