ಶ್ರೀರಾಂಪುರದಲ್ಲಿ 8 ಗಂಟೆ ಸುತ್ತಾಡಿದ್ರೂ ಸಿಗ್ಲಿಲ್ಲ ಬೆಡ್, ಅಮ್ಮನ ಹೊಟ್ಟೆಯಲ್ಲೇ ಮಗು ಸಾವು..

[lazy-load-videos-and-sticky-control id=”RqWzG14AaAI”] ಬೆಂಗಳೂರು:ಮುಂಜಾನೆ ಮೂರು ಗಂಟೆಯಿಂದಲೂ ಸುತ್ತಾಡಿ ಸುತ್ತಾಡಿ ಗರ್ಭಿಣಿ ಸುಸ್ತಾಗಿದ್ದರು. ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಅಮ್ಮನ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿರುವ ಘಟನೆ ಇಂದು ನಗರದ ಶ್ರೀರಾಂಪುರದಲ್ಲಿ ನಡೆದಿದೆ. ಶ್ರೀರಾಂಪುರದ ನಿವಾಸಿಯಾಗಿರುವ ಗರ್ಭಿಣಿಗೆ ಮುಂಜಾನೆ ಮೂರು ಗಂಟೆಯಿಂದ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಮನೆಯವರು ಗರ್ಭಿಣಿಯನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಬೆಳಗ್ಗೆ ಮೂರು ಗಂಟೆಯಿಂದಲೂ ವಿಕ್ಟೋರಿಯಾ, ವಾಣಿ ವಿಲಾಸ್, ಶ್ರೀರಾಂಪುರ ಸರ್ಕಾರಿ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆ ಸುತ್ತಾಡಿದ್ರು ಬೆಡ್ ಸಿಗಲಿಲ್ಲ. ಕೊನೆಗೆ ಕೆಸಿ ಜನರಲ್ […]

ಶ್ರೀರಾಂಪುರದಲ್ಲಿ 8 ಗಂಟೆ ಸುತ್ತಾಡಿದ್ರೂ ಸಿಗ್ಲಿಲ್ಲ ಬೆಡ್,  ಅಮ್ಮನ ಹೊಟ್ಟೆಯಲ್ಲೇ ಮಗು ಸಾವು..

Updated on: Jul 20, 2020 | 6:40 PM

[lazy-load-videos-and-sticky-control id=”RqWzG14AaAI”]

ಬೆಂಗಳೂರು:ಮುಂಜಾನೆ ಮೂರು ಗಂಟೆಯಿಂದಲೂ ಸುತ್ತಾಡಿ ಸುತ್ತಾಡಿ ಗರ್ಭಿಣಿ ಸುಸ್ತಾಗಿದ್ದರು. ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಅಮ್ಮನ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿರುವ ಘಟನೆ ಇಂದು ನಗರದ ಶ್ರೀರಾಂಪುರದಲ್ಲಿ ನಡೆದಿದೆ.

ಶ್ರೀರಾಂಪುರದ ನಿವಾಸಿಯಾಗಿರುವ ಗರ್ಭಿಣಿಗೆ ಮುಂಜಾನೆ ಮೂರು ಗಂಟೆಯಿಂದ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಮನೆಯವರು ಗರ್ಭಿಣಿಯನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಬೆಳಗ್ಗೆ ಮೂರು ಗಂಟೆಯಿಂದಲೂ ವಿಕ್ಟೋರಿಯಾ, ವಾಣಿ ವಿಲಾಸ್, ಶ್ರೀರಾಂಪುರ ಸರ್ಕಾರಿ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆ ಸುತ್ತಾಡಿದ್ರು ಬೆಡ್ ಸಿಗಲಿಲ್ಲ.

ಕೊನೆಗೆ ಕೆಸಿ ಜನರಲ್ ಆಸ್ಪತ್ರೆಗೆ ಬರುತ್ತಿದ್ದಂತೆ ಗರ್ಭಿಣಿಗೆ ಆಟೋದಲ್ಲಿಯೇ ಹೆರಿಗೆಯಾಗಿದೆ. ಆದರೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ, ಆರೈಕೆ ಸಿಗದೆ ತಾಯಿ ಗರ್ಭದಲ್ಲೇ ಮಗು ಸಾವನ್ನಪ್ಪಿದೆ. ಆಸ್ಪತ್ರೆಗಳ ನೀರ್ಲಕ್ಷ್ಯತನದಿಂದಲೇ ಮಗು ಬದುಕಲಿಲ್ಲ ಎಂದು ಕುಟುಂಬಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Published On - 1:16 pm, Mon, 20 July 20