ಕಾಂಗ್ರೆಸ್ನಿಂದ ಬೀದಿಗಿಳಿಯಲಿದೆ ವೈದ್ಯರ ಟೀಮ್, ಮನೆ ಮನೆಗೂ ತೆರಳಿ ನಡೆಸ್ತಾರೆ ಕೊವಿಡ್ ಟೆಸ್ಟ್!
[lazy-load-videos-and-sticky-control id=”Unjbp5cnkJI”]ಬೆಂಗಳೂರು: ಕೊರೊನಾ ಮಹಾಮಾರಿ ನಿಯಂತ್ರಣ ಅನ್ನೋದು ಸರ್ಕಾರಕ್ಕೆ ಕಗ್ಗಂಟಾಗಿಯೇ ಉಳಿದಿದೆ. ಏನೇ ಬದಲಾವಣೆ ಮಾಡಿದ್ರೂ, ಯಾವುದೇ ಕ್ರಮ ಕೈಗೊಂಡ್ರೂ ವೈರಸ್ ಹರಡೋದು ಮಾತ್ರ ಹತೋಟಿಗೆ ಬರ್ತಾನೆ ಇಲ್ಲ. ಹೀಗಾಗಿ ರಾಜ್ಯ ಕಾಂಗ್ರೆಸ್ ಪಡೆ ಕೊವಿಡ್ಗೆ ಮೂಗುದಾರ ಹಾಕೋಕೆ ಸಜ್ಜಾಗಿದ್ದು, ಕಾಂಗ್ರೆಸ್ ಡಾಕ್ಟರ್ಗಳ ಟೀಮೇ ಹಳ್ಳಿ ಹಳ್ಳಿಗೂ ಎಂಟ್ರಿ ಕೊಡೋಕೆ ಮುಂದಾಗಿದೆ. ಸಾವಿನ ಸರಣಿ ನಿಲ್ತಿಲ್ಲ.. ಸೋಂಕಿನ ಸುನಾಮಿ ಹತೋಟಿಗೆ ಬರ್ತಿಲ್ಲ.. ಲಾಕ್ಡೌನ್ ಮಾಡಿದ್ರೂ ಪ್ರಯೋಜನವೇ ಆಗ್ತಿಲ್ಲ.. ಮಹಾಮಾರಿ ಆರ್ಭಟ ಕಮ್ಮಿನೇ ಆಗ್ತಿಲ್ಲ.. ಕೊರೊನಾ ಹಾವಳಿಗೆ ರೋಸಿ […]
[lazy-load-videos-and-sticky-control id=”Unjbp5cnkJI”]ಬೆಂಗಳೂರು: ಕೊರೊನಾ ಮಹಾಮಾರಿ ನಿಯಂತ್ರಣ ಅನ್ನೋದು ಸರ್ಕಾರಕ್ಕೆ ಕಗ್ಗಂಟಾಗಿಯೇ ಉಳಿದಿದೆ. ಏನೇ ಬದಲಾವಣೆ ಮಾಡಿದ್ರೂ, ಯಾವುದೇ ಕ್ರಮ ಕೈಗೊಂಡ್ರೂ ವೈರಸ್ ಹರಡೋದು ಮಾತ್ರ ಹತೋಟಿಗೆ ಬರ್ತಾನೆ ಇಲ್ಲ. ಹೀಗಾಗಿ ರಾಜ್ಯ ಕಾಂಗ್ರೆಸ್ ಪಡೆ ಕೊವಿಡ್ಗೆ ಮೂಗುದಾರ ಹಾಕೋಕೆ ಸಜ್ಜಾಗಿದ್ದು, ಕಾಂಗ್ರೆಸ್ ಡಾಕ್ಟರ್ಗಳ ಟೀಮೇ ಹಳ್ಳಿ ಹಳ್ಳಿಗೂ ಎಂಟ್ರಿ ಕೊಡೋಕೆ ಮುಂದಾಗಿದೆ.
ಸಾವಿನ ಸರಣಿ ನಿಲ್ತಿಲ್ಲ.. ಸೋಂಕಿನ ಸುನಾಮಿ ಹತೋಟಿಗೆ ಬರ್ತಿಲ್ಲ.. ಲಾಕ್ಡೌನ್ ಮಾಡಿದ್ರೂ ಪ್ರಯೋಜನವೇ ಆಗ್ತಿಲ್ಲ.. ಮಹಾಮಾರಿ ಆರ್ಭಟ ಕಮ್ಮಿನೇ ಆಗ್ತಿಲ್ಲ.. ಕೊರೊನಾ ಹಾವಳಿಗೆ ರೋಸಿ ಹೋಗಿರೋ ರಾಜ್ಯ ಸರ್ಕಾರ ದಿಕ್ಕೆಟ್ಟು ಹೋಗಿದೆ. ಪರಿಹಾರವೇ ಸಿಗದೆ ಕಂಗಾಲಾಗಿದೆ. ಇದ್ರಿಂದ ಕೊವಿಡ್ಗೆ ಕಡಿವಾಣ ಹಾಕಲು ಕೆಪಿಸಿಸಿ ವೈದ್ಯರ ತಂಡ ಅಖಾಡಕ್ಕೆ ನುಗ್ಗುತ್ತಿದೆ.
ಕಾಂಗ್ರೆಸ್ನಿಂದ ಬೀದಿಗಿಳಿಯಲಿದೆ ವೈದ್ಯರ ಟೀಮ್! ಅಂದ್ಹಾಗೇ, ಕೊವಿಡ್ ನಿಯಂತ್ರಣ ವಿಷಯದಲ್ಲಿ ಸರ್ಕಾರಕ್ಕೆ ಪದೇಪದೆ ಸವಾಲು ಹಾಕ್ತಿದ್ದ ರಾಜ್ಯ ಕಾಂಗ್ರೆಸ್ ಇದೀಗ ತನ್ನದೇ ಕೊವಿಡ್ ವೈದ್ಯರ ತಂಡವನ್ನ ಬೀದಿಗಿಳಿಸ್ತಿದೆ. ಕೊವಿಡ್ಗಾಗಿಯೇ ಕೆಪಿಸಿಸಿ ವಿಶೇಷ ವೈದ್ಯರ ಘಟಕವನ್ನ ಆರಂಭಿಸಿ ಟ್ರೈನಿಂಗ್ ನೀಡೋಕೆ ಶುರು ಮಾಡಿದೆ. ಡಿಕೆಶಿ ಪದಗ್ರಹಣ ಕಾರ್ಯಕ್ರಮಕ್ಕೆ ತಂತ್ರಜ್ಞಾನ ಅಳವಡಿಸಿದ್ದ ಟೆಕ್ಕಿಗಳ ಟೀಮ್ ಇದ್ರಲ್ಲಿ ಕೆಲ್ಸ ಮಾಡಲಿದೆ. ಕೊರೊನಾ ನಿಯಂತ್ರಿಸಲು ಮನೆಮನೆಗೆ ತೆರಳಿ ಟ್ರೀಟ್ಮೆಂಟ್ ಕೊಡೋ ಪ್ಲಾನ್ ಮಾಡಿದೆ.
ವಾರ್ಡ್ಗೊಂದು ಟೀಮ್.. ತಾಲೂಕಿಗೊಬ್ಬ ಡಾಕ್ಟರ್! ಇನ್ನು ನಿನ್ನೆ ನಡೆದ ಡಿಕೆಶಿ ನೇತೃತ್ವದ ಸಭೆಯಲ್ಲಿ ಕಾಂಗ್ರೆಸ್ ಡಾಕ್ಟರ್ಸ್ ಟೀಮ್ನ ರೆಡಿ ಮಾಡಲಾಗಿದೆ. ಈ ಟೀಮ್ ಹೇಗೆ ಕಾರ್ಯನಿರ್ವಹಿಸುತ್ತೆ ಅನ್ನೋದನ್ನ ನೋಡೋದಾದ್ರೆ.
ಕೊರೊನಾ ನಿಯಂತ್ರಣಕ್ಕೆ ‘ಕೈ’ಪಡೆ..! ಮೊದಲು ರಾಜ್ಯದ ಮೂಲೆ ಮೂಲೆಯಿಂದ ವೈದ್ಯರನ್ನ ಗುರುತಿಸಲಾಗುತ್ತೆ. ಕಾಂಗ್ರೆಸ್ ಪರ ಕೆಲಸ ಮಾಡಲು ಬಯಸುವವರನ್ನ ಗುರುತಿಸಿ ಒಂದು ಟೀಮ್ ಮಾಡಲಾಗುತ್ತೆ. ಈ ಡಾಕ್ಟರ್ಸ್ ಟೀಮ್ ಡಿಜಿಟಲ್ ಯೂತ್ಸ್ ಟೀಮ್ ಜತೆ ಕೆಲಸ ಮಾಡುತ್ತೆ. ನಂತ್ರ ವೈದ್ಯರ ತಂಡ ಟೆಕ್ಕಿಗಳಿಗೆ ಪ್ರಾಥಮಿಕ ಕೊವಿಡ್ ಮಾಹಿತಿ ನೀಡ್ತಾರೆ. ನಂತರ ಡಿಜಿಟಲ್ ಯೂತ್ಸ್ ಟೀಮ್ ವಾರ್ಡ್ ಮಟ್ಟದಲ್ಲಿ ತಂಡ ರಚಿಸುತ್ತೆ. ಪ್ರತಿ ಗ್ರಾಮದಲ್ಲಿ ಕನಿಷ್ಠ 10 ಮಂದಿಯ ತಂಡವನ್ನ ರಚಿಸುತ್ತದೆ. ಇವ್ರು ಮನೆ ಮನೆಗೆ ತೆರಳಿ ಉಷ್ಣಾಂಶ, ಆಮ್ಲಜನಕ ಸೇರಿದಂತೆ ಹಲವು ಪರೀಕ್ಷೆಗಳನ್ನ ಮಾಡ್ತಾರೆ.
ಇದರ ಮಾಹಿತಿಯನ್ನ ಲಾಗ್ ಶೀಟ್ನಲ್ಲಿ 4ಎಂಟ್ರಿ ಮಾಡಲಾಗುತ್ತೆ. ಇದಕ್ಕೆ ಪೂರಕವೆಂಬಂತೆ ತಾಲೂಕಿಗೊಂಡು ‘ಕೈ’ ಡಾಕ್ಟರ್ ನೇಮಕ ಮಾಡಲಾಗುತ್ತೆ. ಈ ಡಾಕ್ಟರ್ ಮಾಹಿತಿ ಬಂದ ಕೂಡಲೇ ಶಂಕಿತರ ನೆರವಿಗೆ ಬರ್ತಾರೆ. ಇಲ್ಲದಿದ್ರೆ ಕೈಪಡೆಯ ಹೆಲ್ಪ್ ಲೈನ್ ಶಂಕಿತರನ್ನ ಡಾಕ್ಟರ್ ಬಳಿ ಕಳುಹಿಸುತ್ತೆ. ಅಗತ್ಯ ಬಿದ್ದರೆ ಕೂಡಲೇ ಶಂಕಿತರನ್ನ ಆಸ್ಪತ್ರೆಗೆ ಕೂಡ ದಾಖಲಿಸಲಾಗುತ್ತೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ವೈದ್ಯರು ಎಲ್ಲಾ ಕೇಸ್ಗಳ ಮಾಹಿತಿಯನ್ನ ಸರ್ಕಾರಿ ವೈದ್ಯರಿಗೆ ಕೊಡ್ತಾರೆ.
ಇನ್ನು ಕೆಪಿಸಿಸಿ ಕಾಂಗ್ರೆಸ್ನ ಹೆಲ್ತ್ ಬುಲೆಟಿನ್ ರಿಲೀಸ್ ಮಾಡೋ ಬಗ್ಗೆ ಚರ್ಚೆ ನಡೆಸಿದೆ. ಇದಕ್ಕೆ ಕಾಂಗ್ರೆಸ್ನಲ್ಲಿಯೇ ಹಲವು ಗೊಂದಲಗಳಿವೆ. ಇದಲ್ಲದೆ ಸರ್ಕಾರಿ & ಸ್ಥಳೀಯ ಆಸ್ಪತ್ರೆಗಳಲ್ಲಿರುವ ಬೆಡ್ಗಳ ಬಗ್ಗೆ ಕೂಡ ಕಾಂಗ್ರೆಸ್ ಹೆಲ್ಪ್ ಲೈನ್ ಗ್ರಾಮಸ್ಥರಿಗೆ ಮಾಹಿತಿ ನೀಡಲಿದೆ. ಜೊತೆಗೆ ಆಸ್ಪತ್ರೆಗಳ ಜೊತೆ ನಿರಂತರ ಸಂಪರ್ಕದಲ್ಲಿರಲಿದೆ.
ಒಟ್ನಲ್ಲಿ ಹೇಗಾದ್ರೂ ಮಾಡಿ ರಾಜ್ಯದಲ್ಲಿ ಕೊರೊನಾವನ್ನ ನಿಯಂತ್ರಿಸಬೇಕು ಅಂತಾ ಕಾಂಗ್ರೆಸ್ ಪಣ ತೊಟ್ಟಿದೆ. ಹೀಗಾಗಿ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಕಾಂಗ್ರೆಸ್ನ ಡಾಕ್ಟರ್ಸ್ ಟೀಮ್ ಸರ್ಕಾರ & ಸಾರ್ವಜನಿಕರ ನಡುವೆ ಸೇತುವೆಯಾಗಿ ಕೆಲ್ಸ ಮಾಡಲಿದೆ.
Published On - 7:02 am, Tue, 21 July 20