ವಾರದ ಲಾಕ್ಡೌನ್ ಮುಕ್ತಾಯ, ನಾಳೆಯಿಂದ ಮತ್ತೆ ಲಾಕ್ ಆಗುತ್ತಾ ರಾಜಧಾನಿ?
ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನ ನಾಳೆ ಬೆಳಗ್ಗೆ ಕಣ್ಣು ಬಿಡೋ ಹೊತ್ತಿಗೆ ಒಂದು ವಾರದ ಲಾಕ್ಡೌನ್ ಮುಗಿಯುತ್ತದೆ. ಆದ್ರೆ, ನಿಜವಾಗಿಯೂ ನಾಳೆಗೆ ಲಾಕ್ಡೌನ್ ಮುಗಿಯುತ್ತಾ? ಮುಂದುವರಿಯುತ್ತಾ ಅನ್ನೋ ಗೊಂದಲ ಮಾತ್ರ ಇನ್ನೂ ಹಾಗೇ ಉಳಿದಿದೆ. ಸರ್ಕಾರ ಲಾಕ್ಡೌನ್ ಬೇಡ ಅನ್ನೋ ಬಲವಾದ ನಿಲುವು ಹೊಂದಿದೆ. ಹೀಗಾಗಿ ಇಂದು ಸಿಎಂ ಬಿಎಸ್ವೈ ಏನು ನಿರ್ಧಾರ ತೆಗೆದುಕೊಳ್ತಾರೆ ಅನ್ನೋದ್ರ ಮೇಲೆ ಜನರ ಚಿತ್ತ ನೆಟ್ಟಿದೆ. ನೋ ಲಾಕ್ಡೌನ್.. ನೋ ಲಾಕ್ಡೌನ್.. ನೋ ಲಾಕ್ಡೌನ್ ಅಂತಾ ಭಯಂಕರ ವಿಶ್ವಾಸದಲ್ಲಿ ಸಚಿವ ಆರ್.ಅಶೋಕ್ […]
ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನ ನಾಳೆ ಬೆಳಗ್ಗೆ ಕಣ್ಣು ಬಿಡೋ ಹೊತ್ತಿಗೆ ಒಂದು ವಾರದ ಲಾಕ್ಡೌನ್ ಮುಗಿಯುತ್ತದೆ. ಆದ್ರೆ, ನಿಜವಾಗಿಯೂ ನಾಳೆಗೆ ಲಾಕ್ಡೌನ್ ಮುಗಿಯುತ್ತಾ? ಮುಂದುವರಿಯುತ್ತಾ ಅನ್ನೋ ಗೊಂದಲ ಮಾತ್ರ ಇನ್ನೂ ಹಾಗೇ ಉಳಿದಿದೆ. ಸರ್ಕಾರ ಲಾಕ್ಡೌನ್ ಬೇಡ ಅನ್ನೋ ಬಲವಾದ ನಿಲುವು ಹೊಂದಿದೆ. ಹೀಗಾಗಿ ಇಂದು ಸಿಎಂ ಬಿಎಸ್ವೈ ಏನು ನಿರ್ಧಾರ ತೆಗೆದುಕೊಳ್ತಾರೆ ಅನ್ನೋದ್ರ ಮೇಲೆ ಜನರ ಚಿತ್ತ ನೆಟ್ಟಿದೆ.
ನೋ ಲಾಕ್ಡೌನ್.. ನೋ ಲಾಕ್ಡೌನ್.. ನೋ ಲಾಕ್ಡೌನ್ ಅಂತಾ ಭಯಂಕರ ವಿಶ್ವಾಸದಲ್ಲಿ ಸಚಿವ ಆರ್.ಅಶೋಕ್ ಹೇಳಿದ್ರು. ಇದಾದ ಕೇವಲ ಹದಿನೈದೇ ದಿನಕ್ಕೆ ಬೆಂಗಳೂರನ್ನ ಲಾಕ್ ಮಾಡ್ತಿದ್ದೀವಿ ಅಂತಾ ಸಿಎಂ ಯಡಿಯೂರಪ್ಪ ಘೋಷಣೆ ಮಾಡೇಬಿಟ್ರು. ಈ ರೀತಿಯ ಯುಟರ್ನ್ಗಳಿಂದಲೇ ಬೆಂಗಳೂರಲ್ಲಿ ಲಾಕ್ಡೌನ್ ಎಂಡ್ ಆಗುತ್ತಾ.. ಮುಂದುವರಿಯುತ್ತಾ ಅನ್ನೋ ಪ್ರಶ್ನೆ ಜನಸಾಮಾನ್ಯರಿಗೆ ಬಿಟ್ಟೂ ಬಿಡದೆ ಕಾಡ್ತಿದೆ.
ಹಿಂದಿನ ಆದೇಶದಂತೆ ಸರ್ಕಾರ ನಡೆದುಕೊಂಡ್ರೆ ನಾಳೆ ಇಷ್ಟೊತ್ತಿಗಾಗಲೇ ಬೆಂಗಳೂರು ಫ್ರೀಡೌನ್ ಆಗಿರುತ್ತೆ. ಆದ್ರೆ, ಸರ್ಕಾರ ಏನಾದ್ರೂ ಲಾಕ್ಡೌನ್ ಕಂಟಿನ್ಯೂ ಮಾಡಿದ್ರೆ. ಬೆಂಗಳೂರಿನಲ್ಲಿ ಈಗಿರೋ ದಿನಗಳು ಮತ್ತಷ್ಟು ದಿನ ಮುಂದುವರಿಯುತ್ತೆ. ಲಾಕ್ಡೌನ್ ಮುಗಿಯುತ್ತಾ, ಮುಂದುವರಿಯುತ್ತಾ ಅನ್ನೋ ಪ್ರಶ್ನೆಗೆ ನಿನ್ನೆಯ ಟಾಸ್ಕ್ಫೋರ್ಸ್ ಮೀಟಿಂಗ್ನಲ್ಲೇ ಉತ್ತರ ಸಿಗಬೇಕಿತ್ತು. ಆದ್ರೆ, ಅದು ಅರ್ಧಕ್ಕೆ ನಿಂತ ಪರಿಣಾಮ, ಜನರಲ್ಲಿ ಉಂಟಾಗಿರೋ ಗೊಂದಲ ಇನ್ನೂ ಮುಂದುವರಿದಿದೆ. ಬೆಂಗಳೂರು ಲಾಕ್ಡೌನ್ ಕಂಟಿನ್ಯೂ ಕುರಿತು ಇವತ್ತು ಸಿಎಂ ಬಿಎಸ್ವೈ ಅಧಿಕೃತವಾಗಿ ಘೋಷಿಸಲಿದ್ದಾರೆ. ಹೀಗಾಗಿ ಬೆಂಗಳೂರಿನ ಜನರ ಚಿತ್ತ ಯಡಿಯೂರಪ್ಪರತ್ತ ನೆಟ್ಟಿದೆ.
ಬೆಂಗಳೂರಿನ ‘ಲಾಕ್’ ಓಪನ್ ಆಗುತ್ತಾ..? ಇಲ್ವಾ..? ರಾಜಧಾನಿಯಲ್ಲಿ ಕೊರೊನಾ ನಿಯಂತ್ರಣ ತಪ್ಪಿ, ಸಿಲಿಕಾನ್ ಸಿಟಿ ಕೊವಿಡ್ ಕ್ಯಾಪಿಟಲ್ ಆಗಿ ಬದಲಾಗುವ ಹಂತ ತಲುಪಿದಾಗ, ಕೊರೊನಾ ಚೈನ್ ಬ್ರೇಕ್ ಮಾಡೋ ಉದ್ದೇಶದಿಂದ ಸರ್ಕಾರ ಒಂದು ವಾರದ ಲಾಕ್ಡೌನ್ ಘೋಷಿಸಿತ್ತು. ಒಂದು ವಾರ ಲಾಕ್ಡೌನ್ ಆದ್ರೂ ಬೆಂಗಳೂರಿನಲ್ಲಿ ಕೊರೊನಾ ಇನ್ನೂ ತನ್ನ ಅಟ್ಟಹಾಸ ನಿಲ್ಲಿಸಿಲ್ಲ. ಜೊತೆಗೆ ಸರ್ಕಾರ ಲಾಕ್ಡೌನ್ ವೇಳೆ ಅನೇಕ ವಿನಾಯ್ತಿಗಳನ್ನ ನೀಡಿತ್ತು. ಇದ್ರಿಂದ ಬೆಂಗಳೂರಿನಲ್ಲಿ ಲಾಕ್ಡೌನ್ ಇದ್ಯಾ..? ಇಲ್ವಾ..? ಅನ್ನೋ ಅನುಮಾನ ಬರುವ ಮಟ್ಟಿಗೆ ಜನ ಸಂಚಾರ ಇತ್ತು. ಇವೆರಡು ಕಾರಣಗಳನ್ನ ಸರ್ಕಾರ ಪರಿಗಣಿಸಿದ್ರೆ ಲಾಕ್ಡೌನ್ ಕಂಟಿನ್ಯೂ ಮಾಡೋ ಯೋಚನೆ ಮಾಡಿದಂತಿಲ್ಲ.
ಬೆಂಗಳೂರು ಲಾಕ್ಡೌನ್ ವೇಳೆ ಸರ್ಕಾರ ಕೊವಿಡ್ ಕೇರ್ ಸೆಂಟರ್ಗಳು ಸೇರಿ ಆರೋಗ್ಯ ವಲಯದ ಮೂಲ ಸೌಕರ್ಯ ಹೆಚ್ಚಿಸಲು ಆದ್ಯತೆ ನೀಡಿತ್ತು. ಇದರಲ್ಲಿ ಅಲ್ಪ ಯಶಸ್ಸು ಕಂಡು ಬಂದಂತೆ ಕಾಣ್ತಿದೆ. ಇದನ್ನ ಪರಿಗಣಿಸಿದ್ರೆ ಲಾಕ್ಡೌನ್ ಕಂಟಿನ್ಯೂ ಮಾಡೋ ಸಾಧ್ಯತೆ ಇದೆ. ಬೆಂಗಳೂರಿನ ಅಷ್ಟ ದಿಕ್ಪಾಲಕರಾಗಲಿ, ಆರೋಗ್ಯ ಸಚಿವರಾಗಲಿ ಅಥವಾ ಬೇಱವ ಸಚಿವರನ್ನೇ ಕೇಳಿದ್ರೂ.. ಲಾಕ್ಡೌನ್ ಕಂಟಿನ್ಯೂ ಮಾಡೋದು ಸಿಎಂ ಯಡಿಯೂರಪ್ಪಗೆ ಬಿಟ್ಟ ವಿಚಾರ ಅಂತಾ ಹೇಳ್ತಿದ್ದಾರೆ. ಹೀಗಾಗಿ ಯಡಿಯೂರಪ್ಪ ಇವತ್ತು ಕೈಗೊಳ್ಳೋ ನಿರ್ಧಾರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಲಾಕ್ಡೌನ್ ಮಾಡಿದ್ರೂ, ಬೆಂಗಳೂರಿನ ಪರಿಸ್ಥಿತಿ ಕಂಟ್ರೋಲ್ಗೆ ಬರುವಂತೆ ಕಾಣಿಸ್ತಿಲ್ಲ. ಇದೇ ಕಾರಣಕ್ಕೆ ಸಿಎಂ ಯಡಿಯೂರಪ್ಪ ಬುಧವಾರ, ಗುರುವಾರ ಅಷ್ಟ ದಿಕ್ಪಾಲಕರ ಜೊತೆ ಸಭೆ ನಡೆಸಲು ನಿರ್ಧರಿಸಿದ್ದಾರೆ. ವಲಯವಾರು ಸಚಿವರು, ಸಂಸದರು, ಶಾಸಕರ, ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ನಿನ್ನೆ ಅಪೂರ್ಣವಾಗಿದ್ದ ಟಾಸ್ಕ್ಫೋರ್ಸ್ ಸಭೆ ಇಂದು ಕಂಟಿನ್ಯೂ ಆಗಲಿದೆ. ಈ ಟಾಸ್ಕ್ಫೋರ್ಸ್ ಸಭೆಯಲ್ಲಿ ಬೆಂಗಳೂರು ಲಾಕ್ಡೌನ್ ಕುರಿತು ಅಂತಿಮ ತೀರ್ಮಾನಕ್ಕೆ ಬರೋ ಸಾಧ್ಯತೆ. ಬಹುತೇಕ ಸಚಿವರು ಲಾಕ್ಡೌನ್ ಮಾಡದೆ ಕೊರೊನಾ ಕಂಟ್ರೋಲ್ಗೆ ತರಬೇಕು ಅನ್ನೋ ನಿಲುವು ಹೊಂದಿದ್ದಾರೆ ಅಂತಾ ಗೊತ್ತಾಗಿದೆ. ಆದ್ರೆ, ಸಿಎಂ ಯಡಿಯೂರಪ್ಪರ ಮನಸಿನಲ್ಲಿ ಏನಿದೆ ಅನ್ನೋ ಮಾತ್ರ ಇನ್ನೂ ನಿಗೂಢವಾಗಿದೆ. ಇದೇ ರೀತಿ ಬೆಂಗಳೂರಿನಲ್ಲಿ ಲಾಕ್ಡೌನ್ ಮುಗಿಯುತ್ತಾ..? ಮುಂದುವರಿಯುತ್ತೋ..? ಅನ್ನೋ ಪ್ರಶ್ನೆಗೆ ಉತ್ತರವೂ ಇನ್ನೂ ನಿಗೂಢವಾಗಿಯೇ ಇದೆ.
Published On - 7:34 am, Tue, 21 July 20