ರಮ್ಯಾರನ್ನು ಶೋಗೆ ಕರೆಯುತ್ತೀರಾ? ‘ಹಾಸ್ಟೆಲ್ ಹುಡುಗರು’ ನಿರ್ಮಾಪಕರು ಕೊಟ್ಟರು ಉತ್ತರ

|

Updated on: Jul 20, 2023 | 11:16 PM

Ramya: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಬಿಡುಗಡೆ ವಿರುದ್ಧ ರಮ್ಯಾ ತಂದಿದ್ದ ತಡೆಯಾಜ್ಞೆ ತೆರವಾಗಿದೆ. ಹಾಗಿದ್ದರೂ ಸಹ ರಮ್ಯಾ ಈಗಲೂ ನಮ್ಮ ತಂಡದವರೇ ಎಂದು ಚಿತ್ರತಂಡ ಹೇಳಿಕೊಂಡಿದೆ.

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ‘ (Hostel Hudugaru Bekagiddare) ಸಿನಿಮಾದ ಬಿಡುಗಡೆ ವಿರುದ್ಧ ನಟಿ ರಮ್ಯಾ ತಂದಿದ್ದ ತಾತ್ಕಾಲಿಕ ತಡೆಯಾಜ್ಞೆಯನ್ನು ನ್ಯಾಯಾಲಯ ತೆರವುಗೊಳಿಸಿದೆ. ಚಿತ್ರತಂಡಕ್ಕೆ ಆರಂಭಿಕ ಗೆಲುವು ದೊರೆತಿದೆ. ಸಿನಿಮಾದ ಬಿಡುಗಡೆ ಪೂರ್ವ ನಿಗದಿಯಾದ ದಿನದಂದೇ ಆಗಲಿದೆ. ಈ ಖುಷಿ ಹಂಚಿಕೊಳ್ಳಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ವರುಣ್, ‘ರಮ್ಯಾ ಅವರು ಸಂಪರ್ಕಕ್ಕೆ ಸಿಕ್ಕರೆ ಅವರನ್ನು ಸೆಲೆಬ್ರಿಟಿ ಶೋಗೆ ಕರೆಯುತ್ತೇವೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ