Video: ಎರಡು ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ ಮೂರು ಅಡಿಯಷ್ಟು ಕಸ ತುಂಬಿ ಹೋದ ಗೇಮರ್
ಎರಡು ವರ್ಷಗಳ ಕಾಲ ಹೋಟೆಲ್ ರೂಮಿನಲ್ಲಿದ್ದ ಗೇಮರ್ ಹೋಗುವಾಗ ಮೂರು ಅಡಿಯಷ್ಟು ಕಸ ತುಂಬಿ ಹೋಗಿರುವ ಘಟನೆ ಚೀನಾದಲ್ಲಿ ನಡೆದಿದೆ. ಸಾಮಾನ್ಯವಾಗಿ ಹೋಟೆಲ್ನಿಂದ ಅತಿಥಿಗಳು ಹೊರಡುವ ಮುನ್ನ ಫ್ಯಾನ್, ಲೈಟ್ ಇತರೆ ಉಪಕರಣಗಳನ್ನು ಆಫ್ ಮಾಡುವುದು, ಟವೆಲ್ಗಳನ್ನು ಸರಿಯಾಗಿ ಮಡಚುವುದು, ಹಾಸಿಗೆಗಳನ್ನು ಜೋಡಿಸುವುದು, ಕಸವನ್ನು ಸರಿಯಾಗಿ ವಿವೇವಾರಿ ಮಾಡುವುದು ಅತಿಥಿಗಳು ಅನುಸರಿಸಬೇಕಾದ ಅಘೋಷಿತ ನಿಯಮಗಳಾಗಿವೆ.
ಬೀಜಿಂಗ್, ಡಿಸೆಂಬರ್ 23: ಎರಡು ವರ್ಷಗಳ ಕಾಲ ಹೋಟೆಲ್ ರೂಮಿನಲ್ಲಿದ್ದ ಗೇಮರ್ ಹೋಗುವಾಗ ಮೂರು ಅಡಿಯಷ್ಟು ಕಸ ತುಂಬಿ ಹೋಗಿರುವ ಘಟನೆ ಚೀನಾದಲ್ಲಿ ನಡೆದಿದೆ. ಸಾಮಾನ್ಯವಾಗಿ ಹೋಟೆಲ್ನಿಂದ ಅತಿಥಿಗಳು ಹೊರಡುವ ಮುನ್ನ ಫ್ಯಾನ್, ಲೈಟ್ ಇತರೆ ಉಪಕರಣಗಳನ್ನು ಆಫ್ ಮಾಡುವುದು, ಟವೆಲ್ಗಳನ್ನು ಸರಿಯಾಗಿ ಮಡಚುವುದು, ಹಾಸಿಗೆಗಳನ್ನು ಜೋಡಿಸುವುದು, ಕಸವನ್ನು ಸರಿಯಾಗಿ ವಿವೇವಾರಿ ಮಾಡುವುದು ಅತಿಥಿಗಳು ಅನುಸರಿಸಬೇಕಾದ ಅಘೋಷಿತ ನಿಯಮಗಳಾಗಿವೆ.
ಚೀನಾದ ಒಬ್ಬ ವ್ಯಕ್ತಿ ಈ ಶಿಷ್ಟಾಚಾರಗಳನ್ನು ಎಷ್ಟು ತೀವ್ರವಾಗಿ ನಿರ್ಲಕ್ಷಿಸಿದನೆಂದರೆ ಅದು ಹೋಟೆಲ್ ಸಿಬ್ಬಂದಿಯನ್ನು ಆಘಾತಗೊಳಿಸಿತು ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನೂ ಹುಟ್ಟುಹಾಕಿತು.
ಹೋಟೆಲ್‌ನ ಶೋಚನೀಯ ಸ್ಥಿತಿಯ ವೀಡಿಯೊ ಎಕ್ಸ್ನಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಅತಿಥಿಯು ಆನ್‌ಲೈನ್ ಗೇಮರ್ ಆಗಿದ್ದು, ಎರಡು ವರ್ಷಗಳ ಕಾಲ ಚಾಂಗ್‌ಚುನ್‌ನಲ್ಲಿರುವ ಹೋಟೆಲ್ನಲ್ಲಿ ಇದ್ದರು. ಹೌಸ್‌ಕೀಪಿಂಗ್ ಸಿಬ್ಬಂದಿಯ ಪ್ರಕಾರ, ಅವರು ಕೋಣೆಯಿಂದ ಹೊರಬರುತ್ತಲೇ ಇರಲಿಲ್ಲ.
ಕೋಣೆಯ ಬಹುತೇಕ ಮೂಲೆಗಳಲ್ಲಿ ಅಸಂಖ್ಯಾತ ಕೊಳಕು ಮತ್ತು ಪುಡಿಪುಡಿಯಾದ ಆಹಾರಗಳು, ಖಾಲಿ ಬಾಟಲಿಗಳು, ಡಬ್ಬಿಗಳು, ಟೇಕ್‌ಅವೇ ಆಹಾರದ ಪೊಟ್ಟಣಗಳು ಹೀಗೆ ಹತ್ತು ಹಲವಾರು ತ್ಯಾಜ್ಯಗಳ ರಾಶಿ ಇಡೀ ರೂಮೊಳಗೆ ತುಂಬಿತ್ತು. ಶೌಚಾಲಯ ಕೂಡ ಅಷ್ಟೇ ಭಯಾನಕವಾಗಿತ್ತು. ಎಲ್ಲೆಂದರಲ್ಲಿ ಬಿದ್ದ ಟಾಯ್ಲೆಟ್ ಪೇಪರ್ಗಳು, ಕೊಳಕು ಕಮೋಡ್ ಹೀಗೆ ಒಮ್ಮೆ ನೋಡಿದರೆ ವಾಕರಿಕೆ ಬರುವಂತಿತ್ತು ಎಂದು ಹೋಟೆಲ್ ಸಿಬ್ಬಂದಿ ಹೇಳಿಕೊಂಡಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ

