ಮನೆಯ ಎಸಿ ಸರ್ವಿಸ್ ಮಾಡಲು ಬಂದು ಕಾರಿಗೆ ಕಲ್ಲು ಹೊಡೆದ್ರು: ಘಟನೆ ಬಿಚ್ಚಿಟ್ಟ ನಿವೃತ್ತ ಪೊಲೀಸ್
ನಿವೃತ್ತ ಪೊಲೀಸ್ ಇನ್ಸಪೆಕ್ಟರ್ ಕಾರಿಗೆ ಕಲ್ಲು ಹೊಡೆದಿರುವ ಘಟನೆ ನೆಲಮಂಗಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಿಶಿನಕುಂಟೆಯ ಕಲ್ಪತರು ಲೇಔಟ್ ನಲ್ಲಿ ನಡೆದಿದೆ. ಮನೆ ಎಸಿ ಸರ್ವೀಸ್ ಮಾಡಲು ಬಂದವರು ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ಹೊನ್ನಪ್ಪ ಎಂಬುವರ ಮನೆಯ ಕಾರಿಗೆ ಕಲ್ಲು ಹೊಡೆದಿದ್ದಾರೆ. ಹೊನ್ನಪ್ಪ ನೆಲಮಂಗಲದ ಅರಿಶಿನಕುಂಟೆಯ ಕಲ್ಪತರು ಲೇಔಟ್ ನಲ್ಲಿ ಎರಡು ವರ್ಷದ ಹಿಂದೆ ಮನೆ ಕಟ್ಟಿಸಿಕೊಂಡು ಬಂದಿದ್ದರು. ಮನೆಯಲ್ಲಿ ಎಸಿ ವರ್ಕ್ ಆಗ್ತಿರಲಿಲ್ಲ ಅಂತ ಸರ್ವೀಸ್ ಸೆಂಟರ್ ಗೆ ಕರೆ ಮಾಡಿದ್ದಾರೆ. ಆದ್ರೆ ಸರಿಯಾಗಿ ರೆಸ್ಪಾನ್ಸ್ ಮಾಡಿರಲಿಲ್ಲ. ಇದರಿಂದ ಹೊನ್ನಪ್ಪ ಕಂಪನಿಗೆ ಫೋನ್ ಮಾಡಿ ಕಂಪ್ಲೆಂಟ್ ಮಾಡಿದ್ದಾರೆ.
ಬೆಂಗಳೂರು, (ಡಿಸೆಂಬರ್ 03): ನಿವೃತ್ತ ಪೊಲೀಸ್ ಇನ್ಸಪೆಕ್ಟರ್ ಕಾರಿಗೆ ಕಲ್ಲು ಹೊಡೆದಿರುವ ಘಟನೆ ನೆಲಮಂಗಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಿಶಿನಕುಂಟೆಯ ಕಲ್ಪತರು ಲೇಔಟ್ ನಲ್ಲಿ ನಡೆದಿದೆ. ಮನೆ ಎಸಿ ಸರ್ವೀಸ್ ಮಾಡಲು ಬಂದವರು ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ಹೊನ್ನಪ್ಪ ಎಂಬುವರ ಮನೆಯ ಕಾರಿಗೆ ಕಲ್ಲು ಹೊಡೆದಿದ್ದಾರೆ. ಹೊನ್ನಪ್ಪ ನೆಲಮಂಗಲದ ಅರಿಶಿನಕುಂಟೆಯ ಕಲ್ಪತರು ಲೇಔಟ್ ನಲ್ಲಿ ಎರಡು ವರ್ಷದ ಹಿಂದೆ ಮನೆ ಕಟ್ಟಿಸಿಕೊಂಡು ಬಂದಿದ್ದರು. ಮನೆಯಲ್ಲಿ ಎಸಿ ವರ್ಕ್ ಆಗ್ತಿರಲಿಲ್ಲ ಅಂತ ಸರ್ವೀಸ್ ಸೆಂಟರ್ ಗೆ ಕರೆ ಮಾಡಿದ್ದಾರೆ. ಆದ್ರೆ ಸರಿಯಾಗಿ ರೆಸ್ಪಾನ್ಸ್ ಮಾಡಿರಲಿಲ್ಲ. ಇದರಿಂದ ಹೊನ್ನಪ್ಪ ಕಂಪನಿಗೆ ಫೋನ್ ಮಾಡಿ ಕಂಪ್ಲೆಂಟ್ ಮಾಡಿದ್ದಾರೆ.
ಇದರಿಂದ ಕೋಪಗೊಂಡಿದ್ದ ಸರ್ವಿಸ್ ಹಾರುನ್ ಖಾನ್ ಹಾಗೂ ಮತ್ತೊಬ್ಬ ಮನೆಗೆ ಬಂದಿದ್ದು, ಆಸಿಡ್ ವಾಶ್ ಮಾಡಲು 12 ಸಾವಿರ ರೂ. ನೀಡುವಂತೆ ಹೇಳಿದ್ದಾರೆ. ಆದ್ರೆ ಅಷ್ಟು ಹಣ ಜಾಸ್ತಿ ಆಯ್ತು ಕೊಡಲು ಆಗಲ್ಲ ಎಂದಿದ್ದಾರೆ. ಕೊನೆಗೆ 5ಸಾವಿರಕ್ಕೆ ಮಾತುಕತೆಯಾಗಿದ್ದು, 4 ಸಾವಿರ ರೂ. ಕೊಟ್ಟು ಇನ್ನುಳಿದ 1 ಸಾವಿರ ರೂ. ಎಸಿ ಕೂಲ್ ಆದ್ರೆ ಹಣ ಕಳಿಸುವುದಾಗಿ ಹೊನ್ನಪ್ಪ ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಆರುನ್ ಖಾನ್ ಮನೆಯಿಂದ ಹೊರ ಬಂದು ಕಲ್ಲು ತೆಗೆದುಕೊಂಡು ಕಾರ್ ಗ್ಲಾಸ್ ಹೊಡೆದಿದ್ದಾನೆ. ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
