ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?

Updated on: Mar 22, 2025 | 8:57 AM

ಕಮೆಂಟೇಟರ್ ಜಾನಿ ಅವರು ‘ಮಜಾ ಟಾಕೀಸ್’ ಶೋಗೆ ಬಂದಿದ್ದಾರೆ. ಅವರು ಕ್ರಿಕೆಟ್ ಕಮೆಂಟೇಟರ್ ಆಗಿದ್ದಾರೆ. ಅವರು ಈಗ ಒಂದು ಅಚ್ಚರಿಯ ಮಾಹಿತಿ ಹಂಚಿಕೊಂಡಿದ್ದಾರೆ. ತಮಗೆ ಈ ಹೆಸರು ಬಂದಿದ್ದು ಹೇಗೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

‘ಜಾನಿ ನಿಕ್ ನೇಮ್ ಹೇಗೆ ಬಂತು’ ಎಂದು ಸೃಜನ್ ಲೋಕೇಶ್ ಅವರು ಕೇಳಿದರು. ಇದಕ್ಕೆ ಉತ್ತರಿಸಿದ ಜಾನಿ, ‘ನನಗೆ ಮರುನಾಮಕರಣ ಆಗಿದ್ದು 1990ರಲ್ಲಿ. ತಂದೆ-ತಾಯಿ ಇಟ್ಟಿದ್ದು ಶ್ರೀನಿವಾಸ್​ಮೂರ್ತಿ ಎಂಬ ಹೆಸರು. ಹಿಂದೂಪುರದಲ್ಲಿ ಒಂದು ಮ್ಯಾಚ್ ನಡೆದಿತ್ತು. ಅದನ್ನು ಆಡೋಕೆ ಹೋದ್ವಿ. ಮ್ಯಾಚ್ ಮುಗಿದ ಬಳಿಕ ಥಿಯೇಟರ್ ಹೋದೆವು. ‘ಕರ್ತವ್ಯಂ’ ಅನ್ನೋದು ಸಿನಿಮಾ ಹೆಸರು. ಈ ಚಿತ್ರದಲ್ಲಿ ಬರೋ ಒಂದು ಪಾತ್ರದ ಹೆಸರು ಜಾನಿ. ಅದು ನನ್ನಂತೆ ಇತ್ತು. ಹೀಗಾಗಿ, ಈ ಹೆಸರು ಇಡಲಾಯಿತು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More