‘ಯಜಮಾನ’ ತಂದುಕೊಟ್ಟ ಭರ್ಜರಿ ಲಾಭದ ಬಗ್ಗೆ ನಿರ್ಮಾಪಕರ ಮಾತು
ವಿಷ್ಣುವರ್ಧನ್ ನಟಿಸಿದ್ದ ‘ಯಜಮಾನ’ ಕನ್ನಡ ಸಿನಿಮಾ 2000 ದಲ್ಲಿ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿತ್ತು. ಆಗಿನ ಕಾಲಕ್ಕೆ ಕೇವಲ ಮೂರು ಕೋಟಿ ರೂಪಾಯಿಯಲ್ಲಿ ನಿರ್ಮಿಸಿದ್ದ ಆ ಸಿನಿಮಾ ಎಷ್ಟು ಕೋಟಿ ಗಳಿಸಿತ್ತೆಂಬುದನ್ನು ನಿರ್ಮಾಪಕರು ಹೇಳಿದ್ದಾರೆ.
ವಿಷ್ಣುವರ್ಧನ್ ನಟಿಸಿದ್ದ ‘ಯಜಮಾನ’ ಸಿನಿಮಾ ಕನ್ನಡದ ಆಲ್ಟೈಮ್ ಹಿಟ್ ಸಿನಿಮಾಗಳಲ್ಲಿ ಒಂದು. ಹಲವು ಚಿತ್ರರಂಗಗಳಲ್ಲಿ ಈ ಸಿನಿಮಾ ಶತದಿನೋತ್ಸವ ಆಚರಿಸಿದ್ದು, ಕಡಿಮೆ ಬಜೆಟ್ನಲ್ಲಿ ಮಾಡಿದ್ದ ಈ ಸಿನಿಮಾ ಆಗಿನ ಕಾಲಕ್ಕೆ ಕೋಟ್ಯಂತರ ರೂಪಾಯಿ ಲಾಭ ತಂದುಕೊಟ್ಟಿತ್ತು. ‘ಯಜಮಾನ’ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕ ರೆಹಮಾನ್, ಆ ಸಿನಿಮಾ ತಂದುಕೊಟ್ಟಿದ್ದ ಲಾಭದ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ. ಕೇವಲ ಮೂರು ಕೋಟಿ ರೂಪಾಯಿ ಬಜೆಟ್ನಲ್ಲಿ ಮಾಡಿದ್ದ ‘ಯಜಮಾನ’ ಸಿನಿಮಾ ಆಗ ತಮಗೆ ಎಷ್ಟು ಹಣ ಮಾಡಿಕೊಟ್ಟಿತು ಎಂಬುದನ್ನು ರೆಹಮಾನ್ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 07, 2024 04:24 PM
Latest Videos