Daily Devotional: ಇದನ್ನು ಮಾಡಿ, ನಿಮ್ಮ ಶನಿ ದೋಷ ಬೇಗ ನಿವಾರಣೆಯಾಗುತ್ತದೆ!
ಇಂದೇ ಶನೇಶ್ಚರ ಜಯಂತಿ. ಶನಿ ದೋಷ ನಿವಾರಣೆಗೆ ದಾರಿ ಏನು ಎಂದು ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಶನಿ ದೇವನನ್ನು ನ್ಯಾಯಕಾರಕನೆಂದು ಪರಿಗಣಿಸಲಾಗುತ್ತದೆ. ನಮ್ಮ ಕರ್ಮಗಳಿಗೆ ಅನುಗುಣವಾಗಿ ಶುಭ ಅಶುಭ ಫಲಗಳನ್ನು ನೀಡುವವನು ಶನಿ. ಸಾಡೆ ಸಾತಿ, ಅರ್ಧಾಷ್ಟಮ, ಅಷ್ಟಮ, ಪಂಚಮ ಶನಿ ದೃಷ್ಟಿ ಮುಂತಾದ ಶನಿ ದೋಷಗಳಿಂದ ಬಳಲುತ್ತಿರುವವರಿಗೆ ಈ ದಿನ ಬಹಳ ಮುಖ್ಯವಾಗಿದೆ.

ಈ ಅಮಾವಾಸ್ಯೆಯಂದು ಶನಿ ದೋಷ ನಿವಾರಣೆಗಾಗಿ ಉಪವಾಸ, ಧ್ಯಾನ, ಪೂಜೆ ಹಾಗೂ ದಾನ ಮಾಡುವುದು ಅತ್ಯಂತ ಶುಭ. ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಎಳ್ಳಿನ ಬತ್ತಿ ದೀಪಗಳನ್ನು ಹಚ್ಚುವುದು, ಶನಿ ಅಷ್ಟೋತ್ತರ ಪಠಿಸುವುದು, ಶನಿಗೆ ವಸ್ತ್ರ ಮತ್ತು ನೈವೇದ್ಯ ಅರ್ಪಿಸುವುದು ಉತ್ತಮ. ಹನುಮಾನ್ ಮತ್ತು ವೆಂಕಟೇಶ್ವರ ಸ್ವಾಮಿ ದೇಗುಲಗಳಿಗೆ ಭೇಟಿ ನೀಡುವುದೂ ಸಹ ಶನಿದೋಷ ನಿವಾರಣೆಗೆ ಸಹಕಾರಿ. ಪ್ರತಿಯೊಬ್ಬರೂ ಭಕ್ತಿಯಿಂದ ಆಚರಿಸುವುದರಿಂದ ಶನಿ ದೇವರ ಕೃಪೆಗೆ ಪಾತ್ರರಾಗಿ ಜೀವನದಲ್ಲಿ ಎದುರಾಗುವ ಕಷ್ಟಗಳಿಂದ ಮುಕ್ತಿ ಪಡೆಯಬಹುದು ಎಂದು ಗುರೂಜಿ ವಿವರಿಸಿದ್ದಾರೆ.