ಮಲೆನಾಡಿನ ಸ್ಪೆಷಲ್ ಚಿಕನ್ ಕೀಮಾ ಬಾಲ್ಸ್; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ
ಮಲೆನಾಡಿನ ಸ್ಪೆಷಲ್ ಚಿಕನ್ ಕೀಮಾ ಬಾಲ್ಸ್

ಮಲೆನಾಡಿನ ಸ್ಪೆಷಲ್ ಚಿಕನ್ ಕೀಮಾ ಬಾಲ್ಸ್; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

| Updated By: preethi shettigar

Updated on: Jul 12, 2021 | 7:36 AM

ಬೊನ್​ ಲೆಸ್​ ಚಿಕನ್ ಅಡುಗೆ ಇಷ್ಟ ಪಡುವವರಿಗಾಗಿ ಇಂದಿನ ಅಡುಗೆ. ಅದುವೇ ಮಲೆನಾಡಿನ ಸ್ಪೆಷಲ್ ಚಿಕನ್ ಕೀಮಾ ಬಾಲ್ಸ್ ಸುಲಭ ವಿಧಾನದ ಜತೆ ಹೇಗೆ ಮಾಡುವುದು ತಿಳಿದುಕೊಳ್ಳೊಣ.

ನಾನ್​ ವೆಜ್​ ಪ್ರಿಯರಿಗೆ ಒಂದಿಲ್ಲಾ ಒಂದು ಹೊಸ ತರಹದ ಅಡುಗೆ ಮಾಡುವುದು ಹೆಚ್ಚು ಖುಷಿ ನೀಡುತ್ತದೆ. ಅದರಲ್ಲೂ ಚಿಕನ್ ಇಷ್ಟ ಪಡುವವರು ಹೆಚ್ಚು ವೈವಿದ್ಯತೆಯನ್ನು ಅಡುಗೆಯಲ್ಲಿ ಬಯಸುತ್ತಾರೆ. ಲೀವರ್ ಫ್ರೈ, ಬೊನ್ ಲೆಸ್ ಚಿಕನ್, ಲೆಗ್ ಪೀಸ್ ಹೀಗೆ ಬೇರೆ ಬೇರೆ ಪೀಸ್​ಗಳನ್ನು ಇಷ್ಟಪಡುತ್ತಾರೆ. ಹೀಗೆ ಬೊನ್​ ಲೆಸ್​ ಚಿಕನ್ ಅಡುಗೆ ಇಷ್ಟ ಪಡುವವರಿಗಾಗಿ ಇಂದಿನ ಅಡುಗೆ. ಅದುವೇ ಮಲೆನಾಡಿನ ಸ್ಪೆಷಲ್ ಚಿಕನ್ ಕೀಮಾ ಬಾಲ್ಸ್ ಸುಲಭ ವಿಧಾನದ ಜತೆ ಹೇಗೆ ಮಾಡುವುದು ತಿಳಿದುಕೊಳ್ಳೊಣ.

ಮಲೆನಾಡಿನ ಸ್ಪೆಷಲ್ ಚಿಕನ್ ಕೀಮಾ ಬಾಲ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು ಬೋನ್​ ಲೆಸ್ ಚಿಕನ್, ಖಾರದ ಪುಡಿ, ಉಪ್ಪು, ಅರಿಶಿಣ, ಕರಿ ಮೆಣಸಿನಕಾಯಿ, ಈರುಳ್ಳಿ, ಹಸಿ ಮೆಣಸಿಕಾಯಿ, ಮೊಟ್ಟೆ, ಕೊತ್ತಂಬರಿ ಸೊಪ್ಪು, ಬ್ರೆಡ್​ ಕ್ರಮ್ಸ್, ಹಾಲು.

ಮಲೆನಾಡಿನ ಸ್ಪೆಷಲ್ ಚಿಕನ್ ಕೀಮಾ ಬಾಲ್ಸ್ ಮಾಡುವ ವಿಧಾನ
ಒಂದು ಕುಕ್ಕರ್​ಗೆ ಚಿಕನ್​, ಅರಿಶಿಣ, ಖಾರದ ಪುಡಿ ಹಾಕಿ ಬೇಯಿಸಿ, ಬಳಿಕ ಬೆಂದ ಚಿಕನ್​ ಅನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ, ನಂತರ ಒಂದು ಪ್ರಾತ್ರೆಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಈರುಳ್ಳಿ, ಕೊತ್ತಂಬರಿಸೊಪ್ಪು, ಉಪ್ಪು, ಕರಿ ಮೆಣಸಿನಕಾಯಿ, ರುಬ್ಬಿದ ಚಿಕನ್​ ಮಿಶ್ರಣ ಹಾಕಿ ಫ್ರೈ ಮಾಡಿಕೊಳ್ಳಿ. ಬಳಿಕ ಇದನ್ನು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ನಂತರ ಈ ಚಿಕನ್​ ಉಂಡೆಯನ್ನು ಮೊಟ್ಟೆಯಲ್ಲಿ ಮುಳುಗಿಸಿ, ಬ್ರೆಡ್​ ಕ್ರಮ್ಸ್​ ಹಾಕಿ ಇಟ್ಟುಕೊಳ್ಳಿ. ಬಳಿಕ ಒಂದು ಪಾತ್ರೆಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಒಂದೊಂದೆ ಚಿಕನ್​ ಉಂಡೆಗಳನ್ನು ಎಣ್ಣೆಗೆ ಹಾಕಿ ಹುರಿದುಕೊಳ್ಳಿ. ಈಗ ಬಿಸಿ ಬಿಸಿಯಾದ ಚಿಕನ್​ ಕೀಮಾ ಬಾಲ್ಸ್​ ಸವಿಯಲು ಸಿದ್ಧ.

ಇದನ್ನೂ ಓದಿ:
ಹೋಲ್ ಚಿಕನ್ ರೋಸ್ಟ್; ಸರಳ ವಿಧಾನದ ಜತೆ ಮನೆಯಲ್ಲೇ ಮಾಡಿ ಸವಿಯಿರಿ

ಚಿಕನ್ ಹರಿಯಾಲಿ ಟಿಕ್ಕ; ಸರಳ ವಿಧಾನದ ಜತೆ ಮಾಡಿ ಸವಿಯಿರಿ