Recipe of the day: ಮನೆಯಲ್ಲೇ ಚಿಕನ್ ಲೆಗ್ ಪೀಸ್ ಮಾಡುವ ಸರಳ ವಿಧಾನ ಇಲ್ಲಿದೆ ನೋಡಿ

| Updated By: preethi shettigar

Updated on: Sep 05, 2021 | 8:57 AM

ಚಿಕನ್ ಇಷ್ಟಪಡುವವರು ಹೆಚ್ಚು ವೈವಿಧ್ಯತೆಯನ್ನು ಇಷ್ಟಪಡುತ್ತಾರೆ. ಚಿಕನ್ ಲಿವರ್ ಫ್ರೈ, ಕಬಾಬ್, ಸುಕ್ಕ, ಬಿರಿಯಾನಿ, ಹೀಗೆ ಹಲವು ಬಗೆ ಇದೆ.

ನಾನ್​ ವೆಜ್​ ಪ್ರಿಯರಿಗೆ ದಿನಕ್ಕೆ ಒಂದಿಲ್ಲಾ ಒಂದು ಹೊಸ ತರಹದ ಅಡುಗೆಯನ್ನು ಸವಿಯುವ ಬಯಕೆ ಇರುತ್ತದೆ. ಅದರಲ್ಲೂ ಚಿಕನ್ ಇಷ್ಟಪಡುವವರು ಹೆಚ್ಚು ವೈವಿಧ್ಯತೆಯನ್ನು ಇಷ್ಟಪಡುತ್ತಾರೆ. ಚಿಕನ್ ಲಿವರ್ ಫ್ರೈ, ಕಬಾಬ್, ಸುಕ್ಕ, ಬಿರಿಯಾನಿ, ಹೀಗೆ ಹಲವು ಬಗೆ ಇದೆ. ಹೀಗಾಗಿ ಚಿಕನ್​ ಲೆಗ್​ ಪೀಸ್​ ಇಷ್ಟಪಡುವವರಿಗಾಗಿ ಇಂದಿನ ಅಡುಗೆ. ಮನೆಯಲ್ಲೇ ಚಿಕನ್​ ಲೆಗ್​ ಪೀಸ್​ ಮಾಡುವುದು ಹೇಗೆ ಎಂದು ಇಂದು ತಿಳಿದುಕೊಳ್ಳೋಣ.

ಚಿಕನ್ ಲೆಗ್ ಪೀಸ್ ಮಾಡಲು ಬೇಕಾಗುವ ಸಾಮಾಗ್ರಿಗಳು ಖಾರದ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಬಾಬ್ ಪೌಡರ್, ಉಪ್ಪು, ಮೊಟ್ಟೆ, ಚ್ಯಾಟ್ ಮಸಾಲಾ, ನಿಂಬೆ ಹಣ್ಣು, ಚಿಕನ್ ಲೆಗ್ ಪೀಸ್.

ಚಿಕನ್ ಲೆಗ್ ಪೀಸ್ ಮಾಡುವ ವಿಧಾನ
ಮೊದಲು ಒಂದು ಬೌಲ್​ಗೆ ಕಬಾಬ್ ಪೌಡರ್, ಖಾರದ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಮೊಟ್ಟೆ, ಚಿಕನ್ ಲೆಗ್ ಪೀಸ್ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಒಂದು ಪಾತ್ರೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಕಲಸಿಟ್ಟ ಲೆಗ್ ಪೀಸ್ ಹಾಕಿ ಕರಿಯಿರಿ. ಬಳಿಕ ಅದನ್ನು ಜಜ್ಜಿ ಮತ್ತೆ ಎಣ್ಣೆಯಲ್ಲಿ ಕರಿಯಿರಿ. ಬಳಿಕ ಲಿಂಬೆ ರಸ ಮತ್ತು ಚ್ಯಾಟ್ ಮಸಾಲಾ ಹಾಕಿದರೆ, ರುಚಿಕರವಾದ ಚಿಕನ್ ಲೆಗ್ ಪೀಸ್ ಸವಿಯಲು ಸಿದ್ಧ.

ಇದನ್ನೂ ಓದಿ:
ಭಾನುವಾರದ ಸ್ಪೆಷಲ್​ ಚಿಕನ್​ ಚಿಲ್ಲಿ ಪೆಪ್ಪರ್: ಸರಳ ವಿಧಾನದಲ್ಲಿ ಇಂದೇ ಮಾಡಿ ಸವಿಯಿರಿ

ಗೋಡಂಬಿ ಚಿಕನ್ ಫ್ರೈ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ