ಜೋಳದ ಹಿಟ್ಟಿನಲ್ಲೂ ಇಡ್ಲಿ ಮಾಡಬಹುದು; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ
ಜೋಳದ ಇಡ್ಲಿ

ಜೋಳದ ಹಿಟ್ಟಿನಲ್ಲೂ ಇಡ್ಲಿ ಮಾಡಬಹುದು; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

Edited By:

Updated on: Jul 05, 2021 | 7:34 AM

ಬೆಳಿಗ್ಗೆ ತಿಂಡಿಗೆ ದಿನಕ್ಕೊಂದು ಶೈಲಿ ಇರಲೇ ಬೇಕು. ಮಾಡಿದ್ದೇ ಮಾಡಿದರೆ ಮನೆ ಮಂದಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಇಂತಹ ಗೊಂದಲದಲ್ಲಿರುವವರು ಚಿಂತಿಸುವ ಅಗತ್ಯ ಇಲ್ಲ. ಒಮ್ಮೆ ಜೋಳದ ಇಡ್ಲಿ ಮಾಡಿ ಸವಿಯಿರಿ. ಹೊಸ ರುಚಿ ಮನೆಮಂದಿಗೆ ಖುಷಿ ನೀಡುತ್ತದೆ.

YouTube video player

ಬೆಳಿಗ್ಗೆಯ ಉಪಹಾರಕ್ಕೆ, ಮಧ್ಯಾಹ್ನದ ಊಟಕ್ಕೆ, ರಾತ್ರಿ ಊಟಕ್ಕೆ ಯಾವ ಅಡುಗೆ ಮಾಡುವುದು ಎನ್ನುವುದು ಸಾಮಾನ್ಯವಾಗಿ ಮಹಿಳೆಯರಿಗೆ ಒಂದು ಸವಾಲಾಗಿರುತ್ತದೆ. ಅದರಲ್ಲೂ ಬೆಳಿಗ್ಗೆ ತಿಂಡಿಗೆ ದಿನಕ್ಕೊಂದು ಶೈಲಿ ಇರಲೇ ಬೇಕು. ಮಾಡಿದ್ದೇ ಮಾಡಿದರೆ ಮನೆ ಮಂದಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಇಂತಹ ಗೊಂದಲದಲ್ಲಿರುವವರು ಚಿಂತಿಸುವ ಅಗತ್ಯ ಇಲ್ಲ. ಒಮ್ಮೆ ಜೋಳದ ಇಡ್ಲಿ ಮಾಡಿ ಸವಿಯಿರಿ. ಹೊಸ ರುಚಿ ಮನೆಮಂದಿಗೆ ಖುಷಿ ನೀಡುತ್ತದೆ.

ಜೋಳದ ಇಡ್ಲಿ ಮಾಡಲು ಬೇಕಾಗುವ ಸಾಮಾಗ್ರಿಗಳು ಈರುಳ್ಳಿ, ಕರಿಬೇವು, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಉದ್ದಿನ ಬೇಳೆ, ಅಡಿಗೆ ಸೋಡಾ, ಅಡುಗೆ ಎಣ್ಣೆ, ಉಪ್ಪು, ಜೋಳದ ಹಿಟ್ಟು.

ಜೋಳದ ಇಡ್ಲಿ ಮಾಡುವ ವಿಧಾನ
ನೆನೆಸಿದ ಉದ್ದಿನ ಬೇಳೆಯನ್ನು ರುಬ್ಬಿಕೊಳ್ಳಬೇಕು, ಬಳಿಕ ಒಂದು ಪಾತ್ರೆಗೆ ಜೋಳದ ಹಿಟ್ಟು, ರುಬ್ಬಿದ ಉದ್ದಿನ ಬೇಳೆ ಮಿಶ್ರಣ, ಹಾಕಿ ಚೆನ್ನಾಗಿ ಕಲಸಿ 8 ಗಂಟೆ ಇಡಬೇಕು. ಬಳಿಕ ಇದಕ್ಕೆ ಈರುಳ್ಳಿ, ಕರಿಬೇವು, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಉಪ್ಪು, ಅಡಿಗೆ ಸೋಡಾ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಇಡ್ಲಿ ಪಾತ್ರೆ ಇಟ್ಟು ಅದು ಕಾದ ಮೇಲೆ ಕಲಸಿದ ಹಿಟ್ಟನ್ನು ಹಾಕಿ 15 ನಿಮಿಷ ಬೇಯಿಸಿ. ಈಗ ರುಚಿಕರವಾದ ಜೋಳದ ಇಡ್ಲಿ ಸವಿಯಲು ಸಿದ್ಧ.

ಇದನ್ನೂ ಓದಿ:

ಬಳ್ಳಾರಿ ಸ್ಪೇಷಲ್ ಮಸಾಲೆ ರೊಟ್ಟಿ; ಸರಳ ವಿಧಾನದ ಜತೆ ಮಾಡಿ ಸವಿಯಿರಿ

ಕೊಡಗು ಶೈಲಿಯ ಅಕ್ಕಿ ರೊಟ್ಟಿ; ಸರಳ ವಿಧಾನದ ಜತೆ ಮಾಡಿ ಸವಿಯಿರಿ

Published on: Jul 05, 2021 07:31 AM
Follow Us