Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಸ್ಪೇಷಲ್ ಮಸಾಲೆ ರೊಟ್ಟಿ; ಸರಳ ವಿಧಾನದ ಜತೆ ಮಾಡಿ ಸವಿಯಿರಿ

TV9 Web
| Updated By: preethi shettigar

Updated on: Jun 29, 2021 | 7:46 AM

ಬೆಳಿಗ್ಗೆ ತಿಂಡಿಗೆ ದಿನಕ್ಕೊಂದು ಶೈಲಿ ಇರಲೇ ಬೇಕು. ಮಾಡಿದ್ದೇ ಮಾಡಿದರೆ ಮನೆ ಮಂದಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಇಂತಹ ಗೊಂದಲದಲ್ಲಿರುವವರು ಚಿಂತಿಸುವ ಅಗತ್ಯ ಇಲ್ಲ. ಒಮ್ಮೆ ಬಳ್ಳಾರಿ ಸ್ಪೇಷಲ್ ಮಸಾಲೆ ರೊಟ್ಟಿ ಅಥವಾ ವಡಪ್ಪಿ ಮಾಡಿ ಸವಿಯಿರಿ. ಹೊಸ ರುಚಿ ಮನೆಮಂದಿಗೆ ಖುಷಿ ನೀಡುತ್ತದೆ.

ಬೆಳಿಗ್ಗೆಯ ಉಪಹಾರಕ್ಕೆ, ಮಧ್ಯಾಹ್ನದ ತಿಂಡಿಗೆ, ರಾತ್ರಿ ಊಟಕ್ಕೆ ಯಾವ ಅಡುಗೆ ಮಾಡುವುದು ಎನ್ನುವುದು ಸಾಮಾನ್ಯವಾಗಿ ಮಹಿಳೆಯರಿಗೆ ಒಂದು ಸವಾಲಾಗಿರುತ್ತದೆ. ಅದರಲ್ಲೂ ಬೆಳಿಗ್ಗೆ ತಿಂಡಿಗೆ ದಿನಕ್ಕೊಂದು ಶೈಲಿ ಇರಲೇ ಬೇಕು. ಮಾಡಿದ್ದೇ ಮಾಡಿದರೆ ಮನೆ ಮಂದಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಇಂತಹ ಗೊಂದಲದಲ್ಲಿರುವವರು ಚಿಂತಿಸುವ ಅಗತ್ಯ ಇಲ್ಲ. ಒಮ್ಮೆ ಬಳ್ಳಾರಿ ಸ್ಪೇಷಲ್ ಮಸಾಲೆ ರೊಟ್ಟಿ ಅಥವಾ ವಡಪ್ಪಿ ಮಾಡಿ ಸವಿಯಿರಿ. ಹೊಸ ರುಚಿ ಮನೆಮಂದಿಗೆ ಖುಷಿ ನೀಡುತ್ತದೆ.

ಬಳ್ಳಾರಿ ಸ್ಪೇಷಲ್ ಮಸಾಲೆ ರೊಟ್ಟಿ ಮಾಡಲು ಬೇಕಾಗುವ ಸಾಮಾಗ್ರಿಗಳು ಕಡಲೆ ಹಿಟ್ಟು, ಗೋಧಿ ಹಿಟ್ಟು, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಕ್ಯಾರೆಟ್, ಈರುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಅಜ್ವಾನ, ಕರಿ ಮೆಣಸಿನ ಪುಡಿ, ಅರಿಶಿಣದ ಪುಡಿ, ಬೇವಿನ ಸೊಪ್ಪು, ಹಸಿಮೆಣಸು, ಬಿಳಿ ಎಳ್ಳು, ಅಡುಗೆ ಎಣ್ಣೆ

ಬಳ್ಳಾರಿ ಸ್ಪೇಷಲ್ ಮಸಾಲೆ ರೊಟ್ಟಿ ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಗೋಧಿ ಹಿಟ್ಟು, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಬಳಿಕ ಇದಕ್ಕೆ ಕ್ಯಾರೆಟ್, ಈರುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಅಜ್ವಾನ, ಕರಿ ಮೆಣಸು ಪುಡಿ, ಅರಿಶಿಣ ಪುಡಿ, ಬೇವಿನ ಸೊಪ್ಪು, ಹಸಿಮೆಣಸು, ಬಿಳಿ ಎಳ್ಳು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ನಂತರ ಇದಕ್ಕೆ ಬಿಸಿ ನೀರು ಹಾಕಿ ರೊಟ್ಟಿ ಹದಕ್ಕೆ ತಯಾರಿಸಿಕೊಳ್ಳಿ. ಬಳಿಕ ಅದನ್ನು ರೊಟ್ಟಿ ಗಾತ್ರಕ್ಕೆ ತಟ್ಟಿಕೊಳ್ಳಬೇಕು. ನಂತರ ತವಾಗೆ ಎಣ್ಣೆ ಹಾಕಿ ಅದು ಕಾದ ಮೇಲೆ ತಟ್ಟಿದ ರೊಟ್ಟಿ ಹಾಕಿ ಬೇಯಿಸಿಕೊಳ್ಳಿ. ಈಗ ರುಚಿಕರವಾದ ಬಳ್ಳಾರಿ ಸ್ಪೇಷಲ್ ಮಸಾಲೆ ರೊಟ್ಟಿ ಅಥವಾ ವಡಪ್ಪಿ ಸವಿಯಲು ಸಿದ್ಧ.

ಇದನ್ನೂ ಓದಿ:

ಕೊಡಗು ಶೈಲಿಯ ಅಕ್ಕಿ ರೊಟ್ಟಿ; ಸರಳ ವಿಧಾನದ ಜತೆ ಮಾಡಿ ಸವಿಯಿರಿ

ಮಟನ್ ದೊನ್ನೆ ಬಿರಿಯಾನಿ; ಮನೆಯಲ್ಲೇ ಸರಳ ವಿಧಾನದ ಜತೆ ಮಾಡಿ ಸವಿಯಿರಿ