ಕೊಡಗು ಶೈಲಿಯ ಅಕ್ಕಿ ರೊಟ್ಟಿ; ಸರಳ ವಿಧಾನದ ಜತೆ ಮಾಡಿ ಸವಿಯಿರಿ

TV9 Web
| Updated By: preethi shettigar

Updated on: Jun 27, 2021 | 7:43 AM

ಬೆಳಿಗ್ಗೆ ತಿಂಡಿಗೆ ದಿನಕ್ಕೊಂದು ಶೈಲಿ ಇರಲೇ ಬೇಕು. ಮಾಡಿದ್ದೇ ಮಾಡಿದರೆ ಮನೆ ಮಂದಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಇಂತಹ ಗೊಂದಲದಲ್ಲಿರುವವರು ಚಿಂತಿಸುವ ಅಗತ್ಯ ಇಲ್ಲ. ಒಮ್ಮೆ ಈ ಕೊಡಗು ಶೈಲಿಯ ಅಕ್ಕಿ ರೊಟ್ಟಿ ಮಾಡಿ ಸವಿಯಿರಿ. ಹೊಸ ರುಚಿ ಮನೆಮಂದಿಗೆ ಖುಷಿ ನೀಡುತ್ತದೆ.

ಬೆಳಿಗ್ಗೆಯ ಉಪಹಾರಕ್ಕೆ, ಮಧ್ಯಾಹ್ನದ ತಿಂಡಿಗೆ, ರಾತ್ರಿ ಊಟಕ್ಕೆ ಯಾವ ಅಡುಗೆ ಮಾಡುವುದು ಎನ್ನುವುದು ಸಾಮಾನ್ಯವಾಗಿ ಮಹಿಳೆಯರಿಗೆ ಒಂದು ಸವಾಲಾಗಿರುತ್ತದೆ. ಅದರಲ್ಲೂ ಬೆಳಿಗ್ಗೆ ತಿಂಡಿಗೆ ದಿನಕ್ಕೊಂದು ಶೈಲಿ ಇರಲೇ ಬೇಕು. ಮಾಡಿದ್ದೇ ಮಾಡಿದರೆ ಮನೆ ಮಂದಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಇಂತಹ ಗೊಂದಲದಲ್ಲಿರುವವರು ಚಿಂತಿಸುವ ಅಗತ್ಯ ಇಲ್ಲ. ಒಮ್ಮೆ ಈ ಕೊಡಗು ಶೈಲಿಯ ಅಕ್ಕಿ ರೊಟ್ಟಿ ಮಾಡಿ ಸವಿಯಿರಿ. ಹೊಸ ರುಚಿ ಮನೆಮಂದಿಗೆ ಖುಷಿ ನೀಡುತ್ತದೆ.

ಅಕ್ಕಿ ರೊಟ್ಟಿ ಮಾಡಲು ಬೇಕಾಗುವ ಸಾಮಾಗ್ರಿಗಳು ರಾತ್ರಿ ಮಾಡಿದ ಅನ್ನ, ಅಕ್ಕಿ ಹಿಟ್ಟು, ಉಪ್ಪು, ಅಡುಗೆ ಎಣ್ಣೆ.

ಅಕ್ಕಿ ರೊಟ್ಟಿ ಮಾಡುವ ವಿಧಾನ
ಮೊದಲು ಒಂದು ಪಾತ್ರೆಗೆ ರಾತ್ರಿ ಮಾಡಿದ ಅನ್ನ, ಅಕ್ಕಿ ಹಿಟ್ಟು, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು ನಂತರ ಅದನ್ನು ಉಂಡೆಗಳನ್ನಾಗಿ ಮಾಡಿ. ಬಳಿಕ ಅದನ್ನು ರೊಟ್ಟಿ ಆಕಾರಕ್ಕೆ ತಟ್ಟಿ ಇಡಬೇಕು. ನಂತರ ಒಂದು ಕಾವಲಿ ಇಟ್ಟುಕೊಳ್ಳಿ, ಬಳಿಕ ಅದು ಕಾದ ಮೇಲೆ ತಟ್ಟಿದ ರೊಟ್ಟಿ ಹಾಕಿ ಕಾಯಿಸಿ. ನಂತರ ಕಾವಲಿಯಿಂದ ನೇರವಾಗಿ ಬೆಂಕಿಯಲ್ಲಿ ಸ್ವಲ್ಪ ಅದನ್ನು ರೋಸ್ಟ್ ಮಾಡಿಕೊಳ್ಳಿ. ಈಗ ರುಚಿಕರವಾದ ಅಕ್ಕಿ ರೊಟ್ಟಿ ಚಟ್ನಿ ಜತೆಗೆ ಸವಿಯಲು ಸಿದ್ಧ.

ಇದನ್ನೂ ಓದಿ:

ಹೋಲ್ ಚಿಕನ್ ರೋಸ್ಟ್; ಸರಳ ವಿಧಾನದ ಜತೆ ಮನೆಯಲ್ಲೇ ಮಾಡಿ ಸವಿಯಿರಿ

ಲಟ್ಟಣಿಗೆ ಇಲ್ಲದೇ ರೌಂಡ್​ ರೊಟ್ಟಿ ತಟ್ಟುವುದು ಹೇಗೆ? ಸರಳ ವಿಧಾನದ ವಿಡಿಯೋ ವೈರಲ್​ ಆಯ್ತು