ಹಲಸಿನ ಹಣ್ಣಿನ ಬೀಜದಲ್ಲಿ ಚಟ್ನಿ ಹೇಗೆ ಮಾಡುವುದು ಅಂತೀರಾ ನೀವೇ ನೋಡಿ
ಹಲಸಿನ ಹಣ್ಣಿನ ಬೀಜದ ಚಟ್ನಿ

ಹಲಸಿನ ಹಣ್ಣಿನ ಬೀಜದಲ್ಲಿ ಚಟ್ನಿ ಹೇಗೆ ಮಾಡುವುದು ಅಂತೀರಾ ನೀವೇ ನೋಡಿ

| Updated By: preethi shettigar

Updated on: Jun 20, 2021 | 7:42 AM

ನಾನಾ ಬಗೆಯ ಅಡುಗೆ ಮಾಡಲು ಇಚ್ಛಿಸುವವರು ಹಲಸಿನ ಹಣ್ಣಿನ ಬೀಜದಲ್ಲಿ ಯಾವೆಲ್ಲಾ ವಿಧದ ಅಡುಗೆ ಮಾಡಬಹುದು ಎಂದು ತಿಳಿದುಕೊಳ್ಳುವುದು ಸೂಕ್ತ. ರೊಟ್ಟಿ ಜತೆಗೆ ಹಲಸಿನ ಹಣ್ಣಿನ ಬೀಜದ ಚಟ್ನಿ ಇದ್ದರೆ ತುಂಬಾ ರುಚಿಕರವಾಗಿರುತ್ತದೆ ಎನ್ನುವವರು ಇದನ್ನು ಒಮ್ಮೆ ಮಾಡಿ ನೋಡಿ.

YouTube video player

ಮಳೆಗಾಲದ ಆರಂಭದಲ್ಲಿ ಹಲಸಿನ ಹಣ್ಣಿನದ್ದೇ ಸುದ್ದಿ. ಅದರಲ್ಲೂ ಹಲಸಿನ ಹಣ್ಣಿನ ಸೀಜನ್ ಆರಂಭವಾದರೆ ಸಾಕು ಹಲಸಿನ ಹಣ್ಣಿನ ದೋಸೆ, ಇಡ್ಲಿ, ಮುಳ್ಕ ಮಾಡಲು ಶುರು ಮಾಡುತ್ತಾರೆ. ನಾನಾ ಬಗೆಯ ಅಡುಗೆ ಮಾಡಲು ಇಚ್ಛಿಸುವವರು ಹಲಸಿನ ಹಣ್ಣಿನ ಬೀಜದಲ್ಲಿ ಯಾವೆಲ್ಲಾ ವಿಧದ ಅಡುಗೆ ಮಾಡಬಹುದು ಎಂದು ತಿಳಿದುಕೊಳ್ಳುವುದು ಸೂಕ್ತ. ರೊಟ್ಟಿ ಜತೆಗೆ ಹಲಸಿನ ಹಣ್ಣಿನ ಬೀಜದ ಚಟ್ನಿ ಇದ್ದರೆ ತುಂಬಾ ರುಚಿಕರವಾಗಿರುತ್ತದೆ ಎನ್ನುವವರು ಇದನ್ನು ಒಮ್ಮೆ ಮಾಡಿ ನೋಡಿ.

ಹಲಸಿನ ಹಣ್ಣಿನ ಬೀಜದ ಚಟ್ನಿ ಮಾಡಲು ಬೇಕಾಗುವ ಸಾಮಾಗ್ರಿಗಳು ಹಲಸಿನ ಹಣ್ಣಿನ ಬೀಜ, ಗಾಂಧಾರಿ ಮೆಣಸು, ಲಿಂಬೆ ಹಣ್ಣು, ತೆಂಗಿನ ಕಾಯಿ ತುರಿ, ಉಪ್ಪು, ಈರುಳ್ಳಿ. ಸಾಸಿವೆ, ಬೆಳ್ಳುಳ್ಳಿ, ಅಡುಗೆ ಎಣ್ಣೆ, ಒಣ ಮೆಣಸಿನಕಾಯಿ.

ಹಲಸಿನ ಹಣ್ಣಿನ ಬೀಜದ ಚಟ್ನಿ ಮಾಡುವ ವಿಧಾನ
ಮೊದಲು ಬಾಣಲೆಗೆ ಹಲಸಿನ ಹಣ್ಣಿನ ಬೀಜ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು, ಬಳಿಕ ಮಿಕ್ಸಿಗೆ ಹುರಿದ ಹಲಸಿನ ಹಣ್ಣಿನ ಬೀಜ, ಗಾಂಧಾರಿ ಮೆಣಸು, ತೆಂಗಿನ ಕಾಯಿ ತುರಿ, ಈರುಳ್ಳಿ, ಉಪ್ಪು ಹಾಕಿ ರುಬ್ಬಿಕೊಳ್ಳಬೇಕು. ಇದಾದ ನಂತರ ಒಂದು ಬಾಣಲೆಗೆ ಅಡುಗೆ ಎಣ್ಣೆ, ಸಾಸಿವೆ, ಬೆಳ್ಳುಳ್ಳಿ, ಒಣ ಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ ರುಬ್ಬಿದ ಚಟ್ನಿಗೆ ಹಾಕಬೇಕು. ಈಗ ರುಚಿಕರವಾದ ಹಲಸಿನ ಹಣ್ಣಿನ ಬೀಜದ ಚಟ್ನಿ ಸವಿಯಲು ಸಿದ್ಧ.

ಇದನ್ನೂ ಓದಿ:

Jackfruit: ಹಲಸಿನ ಹಣ್ಣಿನ ಆರೋಗ್ಯಯುತ ಗುಣಗಳ ಬಗ್ಗೆ ತಿಳಿದರೆ ಒಂದು ಹಣ್ಣನ್ನೂ ಹಾಳು ಮಾಡುವುದಿಲ್ಲ

ಹಲಸಿನ ಹಣ್ಣಿನ ಇಡ್ಲಿ: ಕೊಡವರ ಸಾಂಪ್ರದಾಯಿಕ ತಿಂಡಿಯನ್ನು ಮಾಡಿ ಸವಿಯಿರಿ