ಮಲೆನಾಡಿನ ಫೋರ್ಕ್ ಫ್ರೈ; ಮಳೆಗಾಲದಲ್ಲಿ ಅಕ್ಕಿ ರೊಟ್ಟಿ ಜತೆ ಮಾಡಿ ಸವಿಯಿರಿ
ಅನೇಕ ವಿಧಗಳಲ್ಲಿ ಫೋರ್ಕ್ ಅಡುಗೆ ತಯಾರಿಸಲಾಗುತ್ತದೆ. ಅದರಲ್ಲಿ ಫೋರ್ಕ್ ಫ್ರೈ ಕೂಡ ಒಂದು. ರೊಟ್ಟಿ ಜತೆ, ಕಡುಬಿನ ಜತೆ ಇದು ಸವಿಯಲು ಚೆನ್ನಾಗಿರುತ್ತದೆ. ಹಾಗಿದ್ದರೆ ಮಲೆನಾಡಿನ ಫೋರ್ಕ್ ಫ್ರೈ ಮಾಡುವುದು ಹೇಗೆ ಎಂದು ಒಂದು ತಿಳಿದುಕೊಳ್ಳೋಣ.
ಮಲೆನಾಡಿನಲ್ಲಿ ಸಾಮಾನ್ಯವಾಗಿ ಮಳೆಗಾಲ ಬಂತು ಎಂದರೆ ಹಂದಿ ಮಾಂಸ ಸವಿಯಲು ಜನರು ಸಿದ್ಧ ಎಂದರ್ಥ. ಚಳಿಗೆ ಖಾರವಾಗಿ ಎನಾದರು ಬೇಕು ಎಂದಾಗ ಈ ಭಾಗದ ಜನರು ಮೊದಲು ಮಾಡುವ ಅಡುಗೆಯಲ್ಲಿ ಹಂದಿ ಪದಾರ್ಥ ಹೆಚ್ಚು ಜನಪ್ರೀಯ. ಅನೇಕ ವಿಧಗಳಲ್ಲಿ ಫೋರ್ಕ್ ಅಡುಗೆ ತಯಾರಿಸಲಾಗುತ್ತದೆ. ಅದರಲ್ಲಿ ಫೋರ್ಕ್ ಫ್ರೈ ಕೂಡ ಒಂದು. ರೊಟ್ಟಿ ಜತೆ, ಕಡುಬಿನ ಜತೆ ಇದು ಸವಿಯಲು ಚೆನ್ನಾಗಿರುತ್ತದೆ. ಹಾಗಿದ್ದರೆ ಮಲೆನಾಡಿನ ಫೋರ್ಕ್ ಫ್ರೈ ಮಾಡುವುದು ಹೇಗೆ ಎಂದು ಒಂದು ತಿಳಿದುಕೊಳ್ಳೋಣ.
ಮಲೆನಾಡಿನ ಫೋರ್ಕ್ ಫ್ರೈ ಮಾಡಲು ಬೇಕಾದ ಸಾಮಾಗ್ರಿಗಳು ಈರುಳ್ಳಿ, ಹಸಿಮೆಣಸಿನ ಕಾಯಿ, ಶುಂಠಿ, ಬೆಳ್ಳುಳ್ಳಿ, ಅರಿಶಿಣ, ಖಾರದ ಪುಡಿ, ದಿನಯಾ ಪುಡಿ, ಲಿಂಬೆ ಹಣ್ಣು, ಕಾಳುಮೆಣಸಿನ ಪುಡಿ, ಹಂದಿ ಮಾಂಸ, ಉಪ್ಪು.
ಮಲೆನಾಡಿನ ಫೋರ್ಕ್ ಫ್ರೈ ಮಾಡುವ ವಿಧಾನ
ಮೊದಲು ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಹಂದಿ ಮಾಂಸ, ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಅರಿಶಿಣ, ಉಪ್ಪು, ಹಾಕಿ ಕಲಸಿಕೊಳ್ಳಬೇಕು. ಬಳಿಕ ಕಾಳುಮೆಣಸಿನ ಪುಡಿ ಹಾಕಿ ಅದಕ್ಕೆ ಬೇಕಾದಷ್ಟು ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ, 2 ವಿಜಿಲ್ ಬರಿಸಬೇಕು. ನಂತರ ಒಂದು ಬಣಾಲೆಗೆ ದನಿಯಾ ಪುಡಿ ಮತ್ತು ಖಾರದ ಪುಡಿ ಹಾಕಿ ಫ್ರೈ ಮಾಡಬೇಕು. ಬಳಿಕ ವಿಜಿಲ್ ಬಂದ ಕುಕ್ಕರ್ ಓಪನ್ ಮಾಡಿ ಅದಕ್ಕೆ ಈ ಹುರಿದ ಪುಡಿ ಹಾಕಿ ಚೆನ್ನಾಗಿ ಕಲಸಬೇಕು. ಈಗ ರುಚಿಕರವಾದ ಮಲೆನಾಡಿನ ಫೋರ್ಕ್ ಫ್ರೈ ಸವಿಯಲು ಸಿದ್ಧ.
ಇದನ್ನೂ ಓದಿ:
ಚಿಕನ್ ಹರಿಯಾಲಿ ಟಿಕ್ಕ; ಸರಳ ವಿಧಾನದ ಜತೆ ಮಾಡಿ ಸವಿಯಿರಿ
ಸೀಗಡಿ ಪೆಪ್ಪರ್ ಸ್ಪೈಸಿ; ಸರಳವಾದ ವಿಧಾನದ ಜೊತೆ 20 ನಿಮಿಷಗಳಲ್ಲಿ ತಯಾರಿಸಿ