AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ಷಿತ್​ ಶೆಟ್ಟಿ ‘777 ಚಾರ್ಲಿ’ಯಲ್ಲಿ ನಟಿಸಿದ ಶ್ವಾನ ಎಷ್ಟು ಬ್ರಿಲಿಯಂಟ್​ ಗೊತ್ತಾ? ಟ್ರೇನರ್​ ಬಿಚ್ಚಿಟ್ಟ ಅಚ್ಚರಿಯ ವಿಚಾರ

ರಾಜೇಶ್ ದುಗ್ಗುಮನೆ
|

Updated on: Jun 17, 2021 | 9:16 PM

Share

777 ಚಾರ್ಲಿ ಸಿನಿಮಾಕ್ಕೆ ಸುಮಾರು 160 ದಿನಗಳ ಕಾಲ ಶೂಟಿಂಗ್​ ಮಾಡಲಾಗಿದೆ. ಶ್ವಾನದ ಮೂಡ್ ನೋಡಿಕೊಂಡು ಶೂಟ್​ ಮಾಡಬೇಕಾದ ಪರಿಸ್ಥಿತಿ ಇದ್ದಿದ್ದರಿಂದ ಶೂಟಿಂಗ್​ಗೆ ಹೆಚ್ಚು ದಿನ ಹಿಡಿದಿದೆ.

ರಕ್ಷಿತ್​ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾದ ಟೀಸರ್​ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದ ಸಂಪೂರ್ಣ ಕಥೆ ಶ್ವಾನದ ಮೇಲೆಯೇ ಸಾಗಲಿದ್ದು, ಪ್ರಾಣಿ ಪ್ರಿಯರಿಗೆ ಸಾಕಷ್ಟು ಇಷ್ಟವಾಗುವ ನಿರೀಕ್ಷೆಇದೆ. ಈ ಸಿನಿಮಾದಲ್ಲಿ ಕಾಣಿಸಿಕೊಂಡ ನಾಯಿಗೆ ಟ್ರೇನ್​ ಮಾಡಿದ್ದು ಪ್ರಮೋದ್. ಅವರು 777 ಚಾರ್ಲಿ ಚಿತ್ರದ ಮೇಕಿಂಗ್ ಕಥೆಯನ್ನು ಹೇಳಿದ್ದಾರೆ.

777 ಚಾರ್ಲಿ ಸಿನಿಮಾಕ್ಕೆ ಸುಮಾರು 160 ದಿನಗಳ ಕಾಲ ಶೂಟಿಂಗ್​ ಮಾಡಲಾಗಿದೆ. ಶ್ವಾನದ ಮೂಡ್ ನೋಡಿಕೊಂಡು ಶೂಟ್​ ಮಾಡಬೇಕಾದ ಪರಿಸ್ಥಿತಿ ಇದ್ದಿದ್ದರಿಂದ ಶೂಟಿಂಗ್​ಗೆ ಹೆಚ್ಚು ದಿನ ಹಿಡಿದಿದೆ. 777 ಚಾರ್ಲಿ ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ತೆರೆಗೆ ಬರುತ್ತಿದೆ.

ಕಿರಣ್​ ರಾಜ್​ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಕ್ಷಿತ್​ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್​ ಬಿ. ಶೆಟ್ಟಿ, ದಾನಿಶ್​ ಸೇಟ್​ ಮೊದಲಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ಪರಮ್ವಾ ಸ್ಟುಡಿಯೋ ಬ್ಯಾನರ್​ ಅಡಿಯಲ್ಲಿ ಚಿತ್ರ ಮೂಡಿ ಬರುತ್ತಿದೆ.

ಇದನ್ನೂ ಓದಿ: 777 Charlie Teaser: 5 ಭಾಷೆಯಲ್ಲಿ ಮೊದಲ ದಿನವೇ ರಕ್ಷಿತ್ ಶೆಟ್ಟಿಯ 777 ಚಾರ್ಲಿ ಟೀಸರ್​ಗೆ ಸಿಕ್ಕ ವೀವ್ಸ್ ಎಷ್ಟು?​

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More