777 Charlie Teaser: 5 ಭಾಷೆಯಲ್ಲಿ ಮೊದಲ ದಿನವೇ ರಕ್ಷಿತ್ ಶೆಟ್ಟಿಯ 777 ಚಾರ್ಲಿ ಟೀಸರ್​ಗೆ ಸಿಕ್ಕ ವೀವ್ಸ್ ಎಷ್ಟು?​

Rakshit Shetty: ಅಭಿಮಾನಿಗಳಿಗೆ ಮಾತ್ರವಲ್ಲದೆ ಸೆಲೆಬ್ರಿಟಿಗಳಿಗೂ ಕೂಡ ಈ ಟೀಸರ್​ ಸಖತ್​ ಇಷ್ಟ ಆಗಿದೆ. ಎಲ್ಲ ಭಾಷೆಯಲ್ಲಿಯೂ ಸ್ಟಾರ್​ ಕಲಾವಿದರು ಟೀಸರ್​ ಹಂಚಿಕೊಳ್ಳುವ ಮಾಡುವ ಸಾಥ್​ ನೀಡಿದ್ದಾರೆ.

777 Charlie Teaser: 5 ಭಾಷೆಯಲ್ಲಿ ಮೊದಲ ದಿನವೇ ರಕ್ಷಿತ್ ಶೆಟ್ಟಿಯ 777 ಚಾರ್ಲಿ ಟೀಸರ್​ಗೆ ಸಿಕ್ಕ ವೀವ್ಸ್ ಎಷ್ಟು?​
777 ಚಾರ್ಲಿ ರಕ್ಷಿತ್ ಶೆಟ್ಟಿ
Follow us
ಮದನ್​ ಕುಮಾರ್​
| Updated By: Digi Tech Desk

Updated on:Jun 07, 2021 | 10:05 AM

ಆರಂಭದಿಂದಲೂ ಭಿನ್ನ ಸಿನಿಮಾಗಳನ್ನು ಮಾಡಿಕೊಂಡು ಬಂದಿರುವ ನಟ ರಕ್ಷಿತ್​ ಶೆಟ್ಟಿ ಅವರು ಈಗ 777 ಚಾರ್ಲಿ ಸಿನಿಮಾದ ಟೀಸರ್​ ಮೂಲಕ ಭರವಸೆ ಮೂಡಿಸಿದ್ದಾರೆ. ಕಿರಣ್​ರಾಜ್​ ನಿರ್ದೇಶನದ ಈ ಸಿನಿಮಾದ ಟೀಸರ್​ ಭಾನುವಾರ (ಜೂ.6) ರಕ್ಷಿತ್ ಶೆಟ್ಟಿ ಜನ್ಮದಿನದ ಪ್ರಯುಕ್ತ ಬಿಡುಗಡೆ ಆಯಿತು. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ಈ ಚಿತ್ರ ತೆರೆಕಾಣಲಿದೆ. ಹಾಗಾಗಿ ಈ ಎಲ್ಲ ಭಾಷೆಯಲ್ಲೂ ಟೀಸರ್​ ರಿಲೀಸ್​ ಮಾಡಲಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಸೋಮವಾರ ಬೆಳಗ್ಗೆ 11 ಗಂಟೆಗೆ ರಕ್ಷಿತ್​ ಶೆಟ್ಟಿ ಒಡೆತನದ ಪರಮ್​ವಾ ಸ್ಟುಡಿಯೋಸ್​ ಯೂಟ್ಯೂಬ್​ ಚಾನೆಲ್​ನಲ್ಲಿ 777 ಚಾರ್ಲಿ ಚಿತ್ರದ ಟೀಸರ್​ ಬಿಡುಗಡೆ ಆಯಿತು. ಒಂದು ದಿನ ಕಳೆಯುವುದರೊಳಗೆ, ಅಂದರೆ ಕೇವಲ 24 ಗಂಟೆಯೊಳಗೆ ಕೋಟಿ​ಗಟ್ಟಲೆ ವೀವ್ಸ್​ ಪಡೆಯುವಲ್ಲಿ ಈ ಟೀಸರ್​ ಯಶಸ್ವಿ ಆಗಿದೆ. ಕನ್ನಡದಲ್ಲಿ 4.1 ಮಿಲಿಯನ್​ (41 ಲಕ್ಷ), ಮಲಯಾಳಂ ಹಾಗೂ ತೆಲುಗಿನಲ್ಲಿ ತಲಾ 2.9 ಮಿಲಿಯನ್​ (ಎರಡೂ ಸೇರಿ 58 ಲಕ್ಷ), ತಮಿಳಿನಲ್ಲಿ 2.8 ಮಿಲಿಯನ್​ (28 ಲಕ್ಷ) ಹಾಗೂ ಹಿಂದಿಯಲ್ಲಿ 2.3 ಮಿಲಿಯನ್​ (23 ಲಕ್ಷ) ಬಾರಿ ಟೀಸರ್​ ವೀಕ್ಷಣೆ ಕಂಡಿದೆ.

ಎಲ್ಲ ಭಾಷೆಯನ್ನೂ ಸೇರಿಸಿದರೆ ಒಂದು ದಿನದೊಳಗೆ 777 ಚಾರ್ಲಿ ಟೀಸರ್​ಗೆ 15 ಮಿಲಿಯನ್​ ವೀವ್ಸ್​ ಸಿಕ್ಕಂತಾಗಿದೆ. ಅಂದರೆ, 1.5 ಕೋಟಿ ಜನರು ಈ ಟೀಸರ್​ ನೋಡಿದ್ದಾರೆ. ಎರಡನೇ ದಿನವೂ ಯೂಟ್ಯೂಬ್​ನಲ್ಲಿ ಚಾರ್ಲಿ ಹವಾ ಮುಂದುವರಿದಿದೆ. ಅಭಿಮಾನಿಗಳಿಗೆ ಮಾತ್ರವಲ್ಲದೆ ಸೆಲೆಬ್ರಿಟಿಗಳಿಗೂ ಕೂಡ ಈ ಟೀಸರ್​ ಸಖತ್​ ಇಷ್ಟ ಆಗಿದೆ. ಎಲ್ಲ ಭಾಷೆಯಲ್ಲಿಯೂ ಸ್ಟಾರ್​ ಕಲಾವಿದರು ಟೀಸರ್​ ಹಂಚಿಕೊಳ್ಳುವ ಮಾಡುವ ಸಾಥ್​ ನೀಡಿದ್ದಾರೆ.

( 777 ಚಾರ್ಲಿ ಕನ್ನಡ ಟೀಸರ್​)

ರಕ್ಷಿತ್​ ಶೆಟ್ಟಿ ಮತ್ತು ತಂಡದ ಶ್ರಮವನ್ನು ಕಿಚ್ಚ ಸುದೀಪ್​ ಕೂಡ ಮೆಚ್ಚಿಕೊಂಡಿದ್ದಾರೆ. ಟೀಸರ್​ ನೋಡಿರುವ ಅವರು ಟ್ವಿಟರ್​ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ಯೋ ಚಾರ್ಲಿಶೆಟ್ಟಿ. 777 ಚಾರ್ಲಿ ಅದ್ಭುತವಾಗಿರುವಂತಿದೆ. ಇದನ್ನು ಮೆಚ್ಚಿಕೊಳ್ಳದ ಹೊರತು ಬೇರೆ ಆಯ್ಕೆಯೇ ಇಲ್ಲ’ ಎಂದು ಸುದೀಪ್​ ಹೇಳಿರುವುದರಿಂದ ಚಿತ್ರತಂಡಕ್ಕೆ ನೂರಾನೆ ಬಲ ಬಂದಂತಾಗಿದೆ.

ಇದನ್ನೂ ಓದಿ:

Rakshit Shetty Birthday: ‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ ಅಭಿಮಾನಿಗಳ ಪಾಲಿಗೆ ‘ಭರವಸೆಯ ಸ್ಟಾರ್’​ ಆಗಿದ್ದು ಹೇಗೆ?

Rakshit Shetty Birthday: ‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ ಅಭಿಮಾನಿಗಳ ಪಾಲಿಗೆ ‘ಭರವಸೆಯ ಸ್ಟಾರ್’​ ಆಗಿದ್ದು ಹೇಗೆ?

Published On - 9:50 am, Mon, 7 June 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ