ಮಟನ್ ಗ್ರೀನ್ ಮಸಾಲಾ; ಸುಲಭವಾಗಿ 20 ನಿಮಿಷಗಳಲ್ಲಿ ತಯಾರಿಸಬಹುದು
ಮಟನ್ ಗ್ರೀನ್ ಮಸಾಲಾ

ಮಟನ್ ಗ್ರೀನ್ ಮಸಾಲಾ; ಸುಲಭವಾಗಿ 20 ನಿಮಿಷಗಳಲ್ಲಿ ತಯಾರಿಸಬಹುದು

| Updated By: preethi shettigar

Updated on: Jun 23, 2021 | 8:25 AM

ಮಟನ್  ಕಬಾಬ್, ಸುಕ್ಕ, ಬಿರಿಯಾನಿ, ಹೀಗೆ ಹಲವು ಬಗೆ ಇದೆ. ಆದರೆ ಮಟನ್ ಗ್ರೀನ್ ಮಸಾಲಾವನ್ನು ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ. ಸರಳ ವಿಧಾನದ ಜತೆ ಮಟನ್ ಗ್ರೀನ್ ಮಸಾಲಾ ಮಾಡಿ ಸವಿಯಿರಿ.

ನಾನ್​ ವೆಜ್​ ಪ್ರಿಯರಿಗೆ ದಿನಕ್ಕೆ ಒಂದಿಲ್ಲಾ ಒಂದು ಹೊಸ ತರಹದ ಅಡುಗೆಯನ್ನು ಸವಿಯುವ ಬಯಕೆ ಇರುತ್ತದೆ. ಅದರಲ್ಲೂ ಮಟನ್ ಇಷ್ಟಪಡುವವರು ಹೆಚ್ಚು ವೈವಿಧ್ಯತೆಯನ್ನು ಇಷ್ಟಪಡುತ್ತಾರೆ. ಮಟನ್  ಕಬಾಬ್, ಸುಕ್ಕ, ಬಿರಿಯಾನಿ, ಹೀಗೆ ಹಲವು ಬಗೆ ಇದೆ. ಆದರೆ ಮಟನ್ ಗ್ರೀನ್ ಮಸಾಲಾವನ್ನು ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ. ಸರಳ ವಿಧಾನದ ಜತೆ ಮಟನ್ ಗ್ರೀನ್ ಮಸಾಲಾ ಮಾಡಿ ಸವಿಯಿರಿ.

ಮಟನ್ ಗ್ರೀನ್ ಮಸಾಲಾ ಮಾಡಲು ಬೇಕಾಗುವ ಸಾಮಾಗ್ರಿಗಳು ಮೆಂತೆ ಸೊಪ್ಪು, ಪುದೀನಾ ಸೊಪ್ಪು, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಅಡುಗೆ ಎಣ್ಣೆ, ಚಕ್ಕೆ, ಲವಂಗ, ಕರಿ ಮೆಣಸು, ಗಸಗಸೆ, ಹಸಿ ಮೆಣಸಿನಕಾಯಿ, ತೆಂಗಿನ ಕಾಯಿ ಕೊತ್ತಂಬರಿ ಸೊಪ್ಪು ಮತ್ತು ಮಟನ್.

ಮಟನ್ ಗ್ರೀನ್ ಮಸಾಲಾ ಮಾಡುವ ವಿಧಾನ
ಒಂದು ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಚಕ್ಕೆ, ಲವಂಗ, ಕರಿ ಮೆಣಸು, ಗಸಗಸೆ ಹಾಕಿ ಹುರಿದುಕೊಳ್ಳಿ. ನಂತರ ಇದಕ್ಕೆ ಈರುಳ್ಳಿ ಹಾಕಿ, ನಂತರ ಬೆಳ್ಳುಳ್ಳಿ ಮತ್ತು ಶುಂಠಿ ಹಾಕಬೇಕು. ಬಳಿಕ ಅದಕ್ಕೆ ಹಸಿ ಮೆಣಸು, ಮೆಂತೆ ಸೊಪ್ಪು, ಕೊತ್ತಂಬರಿ ಸೊಪ್ಪು, ಪುದೀನಾ ಹಾಕಿ ಫ್ರೈ ಮಾಡಿಕೊಳ್ಳಬೇಕು. ನಂತರ ಮಿಕ್ಸಿ ಜಾರಿಗೆ ತೆಂಗಿನ ಕಾಯಿ ಹಾಕಿ, ಫ್ರೈ ಮಾಡಿದ ಮಸಲಾ ಹಾಕಿ ರುಬ್ಬಿಕೊಳ್ಳಬೇಕು. ಬಳಿಕ ಒಂದು ಕುಕ್ಕರ್​ಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಈರುಳ್ಳಿ ಹಾಕಿ ಫ್ರೈ ಮಾಡಿ. ಬಳಿಕ ಮಟನ್​, ಉಪ್ಪು ಹಾಕಿ ಅದನ್ನು ಚೆನ್ನಾಗಿ ಹುರಿದುಕೊಳ್ಳಿ, ಬಳಿಕ ರುಬ್ಬಿದ ಮಿಶ್ರಣ ಹಾಕಿ 2 ವಿಜಿಲ್ ಬರಿಸಬೇಕು. ಈಗ ರುಚಿಕರವಾದ ಮಟನ್ ಗ್ರೀನ್ ಮಸಾಲಾ ಸವಿಯಲು ಸಿದ್ಧ.

ಇದನ್ನೂ ಓದಿ:

Haleem Recipe ಮಟನ್ ಹಲೀಮ್ ಮಾಡುವುದು ಹೇಗೆ? ಇಲ್ಲಿದೆ ಬಾಯಲ್ಲಿ ನೀರು ತರಿಸುವ ರೆಸಿಪಿ

ಹೋಲ್ ಚಿಕನ್ ರೋಸ್ಟ್; ಸರಳ ವಿಧಾನದ ಜತೆ ಮನೆಯಲ್ಲೇ ಮಾಡಿ ಸವಿಯಿರಿ

Published on: Jun 23, 2021 08:23 AM