ಹುಲ್ಲು ಬೆಳೆಯಿರಿ..! ನೂರಕ್ಕೆ ನೂರು ತೆರಿಗೆ ಉಳಿಸಲು ಉಡುಪಿಯ ಈ ವ್ಯಕ್ತಿಯ ಐಡಿಯಾ

|

Updated on: Jul 28, 2024 | 1:41 PM

Viral video of saving tax: ಸಂಬಳ ಪಡೆಯುತ್ತಿರುವವರಿಗೆ ತೆರಿಗೆ ಹೊರೆ ಇದ್ದೇ ಇದೆ. ಏಳೂ ಮುಕ್ಕಾಲು ಲಕ್ಷ ರೂಗಿಂತ ಹೆಚ್ಚು ಸಂಬಳ ಪಡೆಯುವವರು ತೆರಿಗೆ ಕಟ್ಟಲೇಬೇಕಾಗುತ್ತದೆ. ಸ್ವಲ್ಪವೂ ತೆರಿಗೆ ಕಟ್ಟುವ ಅವಶ್ಯಕತೆ ಬೀಳದ ಹಾಗೆ ಮಾಡುವ ಉಪಾಯವೊಂದನ್ನು ಉಡುಪಿಯ ವ್ಯಕ್ತಿಯೊಬ್ಬರ ನೀಡಿದ್ದಾರೆ. ಇದು ಸುಮ್ಮನೆ ವಿಡಂಬನೆ...

ಬೆಂಗಳೂರು, ಜುಲೈ 28: ಆದಾಯ ತೆರಿಗೆಯ ಹೊರೆ ಹೆಚ್ಚಾಯ್ತೆಂಬುದು ಬಹಳಷ್ಟು ಸಂಬಳದಾರರ ತಗಾದೆ. ಉಡುಪಿಯ ಶ್ರೀನಿಧಿ ಹಂಡ ಎಂಬ ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತೆರಿಗೆ ಉಳಿತಾಯಕ್ಕೆ ಒಂದು ಫನ್ನಿ ಐಡಿಯಾ ಕೊಟ್ಟಿದ್ದಾರೆ. ಕೆಲಸ ಮಾಡಿ, ಆದರೆ, ಸಂಬಳ ಪಡೆಯಬೇಡಿ. ಮನೆಯ ಮೇಲೆ ಟೆರೇಸ್ ಮೇಲಾದರೂ ಸರಿ ಹುಲ್ಲು ಬೆಳೆಯಿರಿ. ಸಂಬಳ ನೀಡುವ ಬದಲು ಈ ಹುಲ್ಲನ್ನು ಖರೀದಿಸುವಂತೆ ಕಂಪನಿಗೆ ತಿಳಿಸಿ ಎಂದು ಶ್ರೀನಿಧಿ ಹಂದೆ ಈ ವಿಡಿಯೋದಲ್ಲಿ ಹೇಳಿದ್ದಾರೆ. ಹುಲ್ಲು ಬೆಳೆದು ಮಾರಿದರೆ ಅದು ಕೃಷಿ ಆದಾಯ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ತೆರಿಗೆ ಇರುವುದಿಲ್ಲ ಎಂಬುದು ಇವರ ಲಾಜಿಕ್. ಗಮನಿಸಿ… ಇದು ಸುಮ್ಮನೆ ವಿಡಂಬನೆಗೆಂದು ಅವರು ಹಾಕಿದ ಪೋಸ್ಟ್.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:56 am, Sun, 28 July 24

Follow us on