ಉಕ್ಕಿಹರಿದ ತುಂಗಭದ್ರಾ ನದಿ, ರಾಯರಯ ತಪಸ್ಸು ಮಾಡಿದ್ದ ಕಟ್ಟೆ ಜಲಾವೃತ
ತುಂಗಭದ್ರಾ ಜಲಾಶಯದಿಂದ ನದಿಗೆ 1 ಲಕ್ಷ 1 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ಇನ್ನು ರಾಯರ ಜಪದ ಕಟ್ಟೆ ಮುಳುಗಡೆಯಾಗಿದೆ.
ರಾಯಚೂರು, (ಜುಲೈ 28) : ತುಂಗಭದ್ರಾ ಜಲಾಶಯದಿಂದ ನದಿಗೆ 1 ಲಕ್ಷ 1 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹದ ಭೀತಿ ಶುರುವಾಗಿದೆ. ಇನ್ನು ಗುರುರಾಘವೇಂದ್ರ ಸ್ವಾಮಿಗಳ ಏಕಶಿಲಾ ಬೃಂದಾವನ ಜಲಾವೃತವಾಗಿದ್ದು, ರಾಯರ ಜಪದ ಕಟ್ಟೆ ಮುಳುಗಡೆಯಾಗಿದೆ. ಮಂತ್ರಾಲಯದಿಂದ ಸುಮಾರು 30 ಕಿಮಿ ದೂರದಲ್ಲಿರುವ ರಾಯಚೂರು ತಾಲೂಕಿನ ಎಲೆಬಿಚ್ಚಾಲಿ ಗ್ರಾಮದಲ್ಲಿರುವ ರಾಯರ ಏಕಶಿಲಾ ಬೃಂದಾವನ ಜಲಾವೃತವಾಗಿದೆ. ಈ ಸ್ಥಳದಲ್ಲಿ ರಾಯರು 13 ವರ್ಷ ತಪಸ್ಸು ಮಾಡಿದ್ದರು ಎನ್ನಲಾಗಿದೆ. ಇನ್ನು ಇಲ್ಲೇ ಇರುವ ಶಿವಲಿಂಗ ಕೂಡ ಮುಳುಗಿದೆ.
Latest Videos