HP Omen Transcend 14: ಎಚ್ಪಿ ಎಐ ಫೀಚರ್ಸ್ ನೂತನ ಲ್ಯಾಪ್ಟಾಪ್ ಬಿಡುಗಡೆ
ನೂತನ ಲ್ಯಾಪ್ಟಾಪ್ ಸರಣಿ ಬಿಡುಗಡೆ ಮಾಡಿದೆ. ಎಚ್ಪಿ ಎಐ ಫೀಚರ್ಸ್ ಸಹಿತ ಒಮೆನ್ ಟ್ರಾನ್ಸೆಂಡ್ 14 ಮತ್ತು ಎಚ್ ಪಿ x360 14 ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಈ ಎರಡೂ ಲ್ಯಾಟ್ಟಾಪ್ ಸೀರೀಸ್ಗಳು ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಬೆಂಬಲ ಹೊಂದಿದೆ.
ದೇಶದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಗೇಮಿಂಗ್ ಮತ್ತು ಕಂಟೆಂಟ್ ಕ್ರಿಯೇಟರ್ಗಳಿಗಾಗಿ ಎಚ್ಪಿ, ನೂತನ ಲ್ಯಾಪ್ಟಾಪ್ ಸರಣಿ ಬಿಡುಗಡೆ ಮಾಡಿದೆ. ಎಚ್ಪಿ ಎಐ ಫೀಚರ್ಸ್ ಸಹಿತ ಒಮೆನ್ ಟ್ರಾನ್ಸೆಂಡ್ 14 ಮತ್ತು ಎಚ್ ಪಿ x360 14 ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಈ ಎರಡೂ ಲ್ಯಾಟ್ಟಾಪ್ ಸೀರೀಸ್ಗಳು ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಬೆಂಬಲ ಹೊಂದಿದೆ. ಜತೆಗೆ ಬಳಕೆದಾರರಿಗೆ ಹೈ-ಎಂಡ್ ಗೇಮಿಂಗ್ ಮತ್ತು ಕಂಟೆಂಟ್ ಕ್ರಿಯೇಶನ್ ಅನುಭವ ಒದಗಿಸಲಿದೆ. ಜತೆಗೆ ತೆಳುವಾದ ಮತ್ತು ಹಗುರ ವಿನ್ಯಾಸದಿಂದಾಗಿ ಪ್ರಯಾಣದ ಸಂದರ್ಭದಲ್ಲಿ ಒಯ್ಯಲು ಅನುಕೂಲವಾಗಲಿದೆ. ಒಮೆನ್ ಟ್ರಾನ್ಸೆಂಡ್ 14 ಬೆಲೆ ₹1,74,999 ರಿಂದ ಆರಂಭವಾದರೆ, ಎಚ್ಪಿ ಎನ್ವಿ x360 14 ಬೆಲೆ ₹99,999 ರ ಆರಂಭಿಕ ದರ ಹೊಂದಿದೆ.