ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ಅಂತ ಇನ್ನೂ ಖಚಿತವಾಗಿಲ್ಲ. ಒಂದು ತಿಂಗಳಿಂದ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಇನ್ನೆರಡು ದಿನಗಳಲ್ಲಿ ಹೇಳ್ತೀನಿ ಅಂತಿದ್ದಾರೆ. ಭವಾನಿ ರೇವಣ್ಣ (Bhavani Revanna) ಟಿಕೆಟ್ ಪಡೆದೇ ತೀರುವ ಹಟಕ್ಕೆ ಬಿದ್ದಿದ್ದಾರೆ. ಆದರೆ ಟಿಕೆಟ್ ಆಕಾಂಕ್ಷಿಯಾಗಿರುವ ಸ್ವರೂಪ್ (HP Swaroop)ತಮ್ಮ ಪ್ರಯತ್ನ ನಿಲ್ಲಿಸಿಲ್ಲ. ಇದೇ ಹಿನ್ನೆಲೆಯಲ್ಲಿ ಸ್ವರೂಪ್ ಇಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ (HD Revanna) ಮನೆಗೆ ಭೇಟಿ ನೀಡಿ ಅಚ್ಚರಿ ಹುಟ್ಟಿಸಿದರು. ವಾಪಸ್ಸು ಹೋಗುವಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸ್ವರೂಪ್ ಮಾಜಿ ಸಚಿವರನ್ನು ಸೌಜನ್ಯತೆಗಾಗಿ ಭೇಟಿಯಾಗಿದ್ದು, ಬಹಳ ದಿನಗಳಿಂದ ಅವರನ್ನು ಭೇಟಿಯಾಗಿರಲಿಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ