ಹುಬ್ಬಳ್ಳಿ ಉದ್ಯಮಿ ಭರತ್ ಜೈನ್ ಮಗನನ್ನು ಕೊಲ್ಲಿಸಲು ರೂ.10 ಲಕ್ಷ ಸುಪಾರಿ ನೀಡಿದ್ದ!
ಹುಬ್ಬಳ್ಳಿಯ ಭರತ್ ಜೈನ್ ಹೆಸರಿನ ತನ್ನ ಮಗ ಅಖಿಲ್ ಜೈನ್ ಪಾಲಿಗೆ ಕೇವಕ ಕಟುಕ ಮಾತ್ರ ಅಲ್ಲ, ರಾಕ್ಷಸನೂ ಆಗಿದ್ದ ಅನ್ನೋದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಹುಬ್ಬಳ್ಳಿ: ಹುಟ್ಟಿಸಿದ ತಂದೆ ಮಗನ ವಿಷಯದಲ್ಲಿ ನಿರ್ದಯಿ ಕಟುಕನಾಗುವುದು ಸಾಧ್ಯವೇ? ಹುಬ್ಬಳ್ಳಿಯ ಭರತ್ ಜೈನ್ (Bharat Jain) ಹೆಸರಿನ ತನ್ನ ಮಗ ಅಖಿಲ್ ಜೈನ್ (Akhil Jain) ಪಾಲಿಗೆ ಕೇವಕ ಕಟುಕ ಮಾತ್ರ ಅಲ್ಲ, ರಾಕ್ಷಸನೂ ಆಗಿದ್ದ ಅನ್ನೋದು ಪೊಲೀಸರ ತನಿಖೆಯಲ್ಲಿ (investigation) ಬಯಲಾಗಿದೆ. ಪ್ರಕರಣವನ್ನು ನಾವು ಈಗಾಗಲೇ ವರದಿ ಮಾಡಿದ್ದೇವೆ. ಹುಬ್ಬಳ್ಳಿಯ ಟಿವಿ9 ವರದಿಗಾರ ರಹಮತ್ ಕಂಚುಗಾರ ಅಖಿಲೇಶ್ ನ ಕೊಲೆ ನಡೆದ ಮತ್ತು ಅವನನ್ನು ಹೂತಿಟ್ಟ ಸ್ಥಳದಲ್ಲಿ ಒಂದು ವಾಕ್ ಥ್ರೂ ವರದಿ ಮಾಡಿದ್ದಾರೆ. ಮಗನ ಹತ್ಯೆಗೆ ಭರತ್ ಜೈನ್ 10 ಲಕ್ಷ ರೂ. ಸುಪಾರಿ ಕೊಟ್ಟಿದ್ದು, ಮಗ ಪ್ರಾಣ ತೆಗಿಸಬೇಡ ಅಂತ ಅಂಗಲಾಚಿದರೂ ಅವನಲ್ಲಿ ಕರುಣೆ ಹುಟ್ಟದೆ ಹೋಗಿದ್ದು ಮೊದಲಾದ ಸಂಗತಿಗಳನ್ನು ವರದಿಗಾರ ಸವಿಸ್ತಾರವಾಗಿ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ