ಶಿರಾ ಗೇಟ್ ಬಳಿಯ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು, ಉರಗ ತಜ್ಞ ಅದನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಒಯ್ದರು!
ದಿಲೀಪ್ ಹಾವನ್ನು ಹಿಡಿದು ಸುರಕ್ಷಿತ ಸ್ಥಳವೊಂದಕ್ಕೆ ತೆಗೆದುಕೊಂಡು ಹೋಗಿ ಬಿಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ತುಮಕೂರು: ಮನೆಗಳ ಆವರಣಕ್ಕೆ ಹಾವು ನುಸುಳುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ ಮಾರಾಯ್ರೇ. ತುಮಕೂರಿನ ಶಿರಾ ಗೇಟ್ (Sira Gate) ಬಳಿ ವಾಸವಾಗಿರುವ ಮಧು ಎನ್ನುವವರ ಮನೆಗೆ ಶನಿವಾರ ಬೆಳಗ್ಗೆ ಭಾರಿಗಾತ್ರದ ನಾಗರಹಾವೊಂದು (cobra) ನುಸುಳಿಬಿಟ್ಟಿದೆ. ಅದು ಹೆಡೆಬಿಚ್ಚಿ ಭುಸುಗುಡುವುದನ್ನು ನೋಡುತ್ತಿದ್ದರೆ ನಿಸ್ಸಂದೇಹವಾಗಿ ಭಯವಾಗುತ್ತದೆ. ಮಧು ಅವರು ಗಾಬರಿಗೊಳ್ಳದೆ ಆ ಭಾಗದ ಉರಗ ತಜ್ಞ ದಿಲೀಪ್ (Dilip) ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ದಿಲೀಪ್ ಹಾವನ್ನು ಹಿಡಿದು ಸುರಕ್ಷಿತ ಸ್ಥಳವೊಂದಕ್ಕೆ ತೆಗೆದುಕೊಂಡು ಹೋಗಿ ಬಿಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.