‘ಗಂಧದ ಗುಡಿ’ ಬಗ್ಗೆ ಪುನೀತ್ ಏನು ಹೇಳಿದ್ದರು? ವಿಜಯ್ ರಾಘವೇಂದ್ರ ವಿವರಿಸಿದ್ದು ಹೀಗೆ

‘ಗಂಧದ ಗುಡಿ’ ಬಗ್ಗೆ ಪುನೀತ್ ಏನು ಹೇಳಿದ್ದರು? ವಿಜಯ್ ರಾಘವೇಂದ್ರ ವಿವರಿಸಿದ್ದು ಹೀಗೆ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 15, 2022 | 2:58 PM

ವಿಜಯ್ ರಾಘವೇಂದ್ರ ಅವರ ಜತೆಗೂ ‘ಗಂಧದ ಗುಡಿ’ ಬಗ್ಗೆ ಪುನೀತ್ ಚರ್ಚೆ ಮಾಡಿದ್ದರು. ‘ಗಂಧದ ಗುಡಿ’ ರಿಲೀಸ್ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ವಿಜಯ್ ರಾಘವೇಂದ್ರ ಅವರು ಮಾತನಾಡಿದ್ದಾರೆ.  

ಕನ್ನಡ ಚಿತ್ರರಂಗದ ಎಲ್ಲರ ಜತೆಗೂ ಪುನೀತ್ ರಾಜ್​ಕುಮಾರ್ (Puneeth Rajkumar) ಅವರು ಒಳ್ಳೆಯ ಗೆಳೆತನ ಹೊಂದಿದ್ದರು. ತಮ್ಮ ಆಲೋಚನೆ ಹಾಗೂ ಯೋಜನೆಗಳ ಬಗ್ಗೆ ಅವರು ಅನೇಕರ ಜತೆ ಚರ್ಚೆ ಮಾಡಿದ್ದರು. ಕನಸಿನ ಪ್ರಾಜೆಕ್ಟ್​ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಬಗ್ಗೆ ಅವರು ಅಗಾಧ ನಿರೀಕ್ಷೆ ಇಟ್ಟುಕೊಂಡಿದ್ದರು. ಈ ಬಗ್ಗೆ ವಿಜಯ್ ರಾಘವೇಂದ್ರ (Vijay Raghavendra) ಅವರ ಜತೆಗೂ ಪುನೀತ್ ಚರ್ಚೆ ಮಾಡಿದ್ದರು. ‘ಗಂಧದ ಗುಡಿ’ ರಿಲೀಸ್ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ವಿಜಯ್ ರಾಘವೇಂದ್ರ ಅವರು ಮಾತನಾಡಿದ್ದಾರೆ.