ತುಮಕೂರು: ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ತುಮಕೂರು ತಾಲೂಕಿನ ಮಾಜಾರ್ ಅಯ್ಯನಪಾಳ್ಯ ಗ್ರಾಮದಲ್ಲಿ ಬೃಹತ್ ಗಾತ್ರದ 13 ಅಡಿ 10 ಕೆಜಿಯ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ. ಹುಲ್ಲು ಕತ್ತರಿಸಲು ಹೋದಾಗ ವ್ಯಕ್ತಿಯ ಕಣ್ಣಿಗೆ ಹೆಬ್ಬಾವು ಕಾಣಿಸಿದ್ದು ಉಗರ ರಕ್ಷಕರಾದ ದಿಲೀಪ್ ಮತ್ತು ಹನುಮಯ್ಯ ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹೆಬ್ಬಾವು ರಕ್ಷಿಸಿದ್ದಾರೆ.
ತುಮಕೂರು, ಜುಲೈ.27: ಹುಲ್ಲು ಕತ್ತರಿಸಲು ಹೋದಾಗ ಬೃಹತ್ ಗಾತ್ರದ ಹೆಬ್ಬಾವಿನಿಂದ ವ್ಯಕ್ತಿ ಪಾರಾದ ಘಟನೆ ತುಮಕೂರು ತಾಲೂಕಿನ ಮಾಜಾರ್ ಅಯ್ಯನಪಾಳ್ಯ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪುಟ್ಟಯ್ಯ ನರಸಿಂಹ ಗೌಡ ಮನೆಯ ಹಿತ್ತಲಿನಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಹಾವು ಕಂಡ ಪುನೀತ್ ತುಮಕೂರಿನ ವಾರಂಗಲ್ ವಾನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣಾ ಸಂಸ್ಥೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಉಗರ ರಕ್ಷಕರಾದ ದಿಲೀಪ್ ಮತ್ತು ಹನುಮಯ್ಯ ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೃಹತ್ ಗಾತ್ರದ 13 ಅಡಿ 10 ಕೆಜಿಯ ಹೆಬ್ಬಾವನ್ನು ಸೆರೆ ಹಿಡಿದಿದ್ದಾರೆ. ಬಳಿಕ ಅರಣ್ಯ ಇಲಾಖೆ ಸ್ಥಳಕ್ಕೆ ಆಗಮಿಸಿದ ಬಳಿಕ ರಕ್ಷಣೆ ಮಾಡಿದ್ದ ಹೆಬ್ಬಾವನ್ನು ದೇವರಾಯನದುರ್ಗ ಅರಣ್ಯಕ್ಕೆ ಬಿಡಲಾಗಿದೆ. ಹೆಬ್ಬಾವು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ