Snake Naresh: ಹಾವು ರಕ್ಷಿಸುತ್ತಿದ್ದವನ ಮನೆಯಲ್ಲಿದ್ದ ನೂರಾರು ಹಾವುಗಳನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ!
ಪ್ಲಾಸ್ಟಿಕ್ ಬ್ಯಾರೆಲ್ ಮತ್ತು ನರೇಶ್ ಹಾವು ಹಿಡಿಯಲು ಬಳಸುತ್ತಿದ್ದ ಚೀಲಗಳಲ್ಲಿ ನೂರಾರು ಹಾವುಗಳು ಸಿಕ್ಕಿವೆ.
ಚಿಕ್ಕಮಗಳೂರು: ನಗರದ ಖ್ಯಾತ ಉರಗ ತಜ್ಞ ಸ್ನೇಕ್ ನರೇಶ್ (snake Naresh) ನಿನ್ನೆ ನಾಗರಹಾವೊಂದರಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ ಸುದ್ದಿಯನ್ನು ನಾವು ವರದಿ ಮಾಡಿದ್ದೇವೆ. ಬದುಕಿದ್ದಾಗ ಅವರು ರಕ್ಷಿಸಿದ ಹಾವುಗಳಿಗೆ ಲೆಕ್ಕವಿಲ್ಲ, ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡರೆ ಜನ ನರೇಶ್ ಗೆ ಫೋನ್ ಮಾಡುತ್ತಿದ್ದರು. ಸಾಮಾನ್ಯವಾಗಿ ಉರಗ ತಜ್ಞರು (snake expert) ತಾವು ರಕ್ಷಿಸಿದ ಹಾವುಗಳನ್ನು ಸುರಕ್ಷಿತವಾದ ಸ್ಥಳಗಳಿಗೆ (safer places) ಒಯ್ದು ಬಿಡುತ್ತಾರೆ. ಆದರೆ ನರೇಶ್ ತಾವು ರಕ್ಷಿಸಿದ ಹಾವುಗಳನ್ನು ಅರಣ್ಯಪ್ರದೇಶಗಳಲ್ಲಿ ಬಿಡದೆ ತಮ್ಮ ಮನೆಯಲ್ಲಿ ಇಟ್ಟುಕೊಂಡ ಆಘಾತಕಾರಿ ಮತ್ತು ಗಾಬರಿ ಹುಟ್ಟಿಸುವ ಸಂಗತಿ ಇಂದು ಅರಣ್ಯ ಇಲಾಖೆಯ ಸಿಬ್ಬಂದಿ ಅವರ ಮನೆಗೆ ಹೋದಾಗ ಬೆಳಕಿಗೆ ಬಂದಿದೆ. ಪ್ಲಾಸ್ಟಿಕ್ ಬ್ಯಾರೆಲ್ ಮತ್ತು ನರೇಶ್ ಹಾವು ಹಿಡಿಯಲು ಬಳಸುತ್ತಿದ್ದ ಚೀಲಗಳಲ್ಲಿ ನೂರಾರು ಹಾವುಗಳು ಸಿಕ್ಕಿವೆ. ಸಿಬ್ಬಂದಿ ಅವುಗಳನ್ನು ಸುರಕ್ಷಿತವಾದ ಸ್ಥಳಗಳಿಗೆ ಒಯ್ದು ಬಿಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ