ನನಗ 64 ವಯಸ್ಸಾಗಿದೆ, ತಾಕತ್ ಇದ್ರ ನನ್ನ ಮಗನ ಜೊತೆ ಕುಸ್ತಿ ಹಿಡಿತಿದ್ರ ಹಿಡಿ: ಕಾಶಪ್ಪನವರ್ಗೆ ದೊಡ್ಡನಗೌಡ ಪಾಟೀಲ್ ಸವಾಲ್
ಮನ್ಯಾಗ ಮಗ ಅದಾನ ಅವನನ್ನು ಕಳಿಸಬಾರದೇನು ಅಂತಾ ಕೇಳ್ತಾರೆ. ಕಾಶಪ್ಪನವರ್ಗೆ ತಿಂಡಿ ಇದ್ದರ ಅವನ ಜತೆ ಕುಸ್ತಿ ಹಿಡಿಯಲಿ ಎಂದು ಸವಾಲ್ ಹಾಕಿದ್ದಾರೆ.
ಬಾಗಲಕೋಟೆ: ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನಡುವಿನ ವಾಕ್ಸಮರ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಇಬ್ಬರ ನಾಯಕರ ನಡುವಿನ ಮಾತಿನ ಸಮರ ಇದೀಗ ಗಂಡಸ್ತನ ಮತ್ತು ತಾಕತ್ತಿನ ಸವಾಲ್ಗೆ ಬಂದು ನಿಂತಿದೆ.
ಗಂಡಸ್ತನ & ತಾಕತ್ತಿನ ಸವಾಲ್ ಹಾಕಿದ್ದ ವಿಜಯಾನಂದ ಕಾಶಪ್ಪನವರ್ ಗೆ ತಿರುಗೇಟು ನೀಡಿದ ದೊಡ್ಡನಗೌಡ ಪಾಟೀಲ್, ನನಗ 64 ವಯಸ್ಸಾಗಿದೆ, ನಾನು ಕುಸ್ತಿಗಿಳಿದರೆ ಜನ ನನ್ನನ್ನು ಬೈತಾರೆ. ಮನ್ಯಾಗ ಮಗ ಅದಾನ ಅವನನ್ನು ಕಳಿಸಬಾರದೇನು ಅಂತಾ ಕೇಳ್ತಾರೆ. ಕಾಶಪ್ಪನವರ್ಗೆ ತಿಂಡಿ ಇದ್ದರ ಅವನ ಜತೆ ಕುಸ್ತಿ ಹಿಡಿಯಲಿ ಎಂದು ಸವಾಲ್ ಹಾಕಿದ್ದಾರೆ.