AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಕರನೊಂದಿಗೆ ವಿವಾಹಿತೆ ಪರಾರಿ ಕೇಸ್​​ಗೆ ಹೊಸ ಟ್ವಿಸ್ಟ್​​: ಪತಿಗೆ ನಿದ್ದೆ ಮಾತ್ರೆ ನೀಡಿ ಪತ್ನಿ ಎಸ್ಕೇಪ್​?

ಪ್ರಿಯಕರನೊಂದಿಗೆ ವಿವಾಹಿತೆ ಪರಾರಿ ಕೇಸ್​​ಗೆ ಹೊಸ ಟ್ವಿಸ್ಟ್​​: ಪತಿಗೆ ನಿದ್ದೆ ಮಾತ್ರೆ ನೀಡಿ ಪತ್ನಿ ಎಸ್ಕೇಪ್​?

ಪ್ರಸನ್ನ ಹೆಗಡೆ
|

Updated on: Apr 22, 2026 | 12:09 PM

Share

ಬಾಗಲಗುಂಟೆಯ ಶರತ್ ಕುಮಾರ್ ಅವರ ಪತ್ನಿ ಪ್ರಿಯಾಂಕಾ ಪ್ರಿಯಕರ ಪ್ರಭು ಜೊತೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ನವೆಂಬರ್ 11ರ ರಾತ್ರಿ 11:50ಕ್ಕೆ ಕಸ ಹಾಕಲು ಹೋಗುವುದಾಗಿ ಹೇಳಿ ಮಕ್ಕಳನ್ನು ಬಿಟ್ಟು ಹೋಗಿದ್ದಾಳೆ. ಪತ್ನಿ ತನಗೆ ನಿದ್ದೆ ಮಾತ್ರೆ ನೀಡಿ ಪರಾರಿಯಾಗಿದ್ದಾಳೆ ಎಂದು ಪತಿ ಶರತ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು, ಏಪ್ರಿಲ್​​ 22: ಕಸ ಹಾಕಲು ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದ ವಿವಾಹಿತೆ ಪ್ರಿಯಕರನ ಜೊತೆ ಪರಾರಿ ಕೇಸ್​​ಗೆ ಹೊಸ ಟ್ವಿಸ್ಟ್​​ ಸಿಕ್ಕಿದೆ. ಪತ್ನಿ ಪ್ರಿಯಾಂಕಾ ತನಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ ಎಂದು ಪತಿ ಶರತ್ ಕುಮಾರ್ ಆರೋಪಿಸಿದ್ದಾರೆ. ಶರತ್ ಕುಮಾರ್ ನೀಡಿರುವ ದೂರಿನ ಪ್ರಕಾರ, ಪ್ರಿಯಾಂಕಾ ಕಸ ಹಾಕಲು ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾರೆ. ಕಸದ ಬುಟ್ಟಿಯ ಜೊತೆಗೆ ಬ್ಯಾಗ್ ಒಂದನ್ನೂ ತೆಗೆದುಕೊಂಡು ಹೋಗಿರುವುದು ತಿಳಿದುಬಂದಿದೆ. ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರನ್ನು ಮನೆಯಲ್ಲಿಯೇ ಬಿಟ್ಟು ಪ್ರಿಯಾಂಕಾ ತೆರಳಿದ್ದಾರೆ. ಈ ಘಟನೆಗೂ ಮುನ್ನ ಪ್ರಿಯಾಂಕಾ ತನಗೆ ಪ್ರಭು ಎಂಬುವನು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಅಥವಾ ಕೊಲ್ಲುವುದಾಗಿ ಬೆದರಿಸುತ್ತಿದ್ದಾನೆ ಎಂದು ಹೇಳಿಕೊಂಡಿದ್ದಳು ಎಂಬುದಾಗಿಯೂ ಶರತ್ ಕುಮಾರ್ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಭು ಬಾಗಲಗುಂಟೆಯಲ್ಲಿ ಕಟಿಂಗ್ ಶಾಪ್ ನಡೆಸುತ್ತಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವರದಿ: ಅರುಣ್​​ ಕುಮಾರ್​​, ಟಿವಿ9 ಬೆಂಗಳೂರು

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us