ಕೊಡಗು ಜಿಲ್ಲೆಯಾದ್ಯಂತ ಈಗ ಹುತ್ತರಿ ಹಬ್ಬದ ಸಂಭ್ರಮ. ಧಾನ್ಯಲಕ್ಷ್ಮಿಯನ್ನು ಭತ್ತದ ಗದ್ದೆಯಿಂದ ಮನೆಗಳಿಗೆ ತಂದು ತುಂಬಿಸಿಕೊಳ್ಳುವುದೇ ಈ ಹಬ್ಬದ ವಿಶೇಷ. ಕೊಡವರ ಜನಪದ ಕಲೆಗಳು ಅನಾವರಣವಾಗುವುದು ಕೂಡ ಇದೇ ಹಬ್ಬದಲ್ಲಿ. ಸುಗ್ಗಿಹಬ್ಬ ಎಂದೇ ಪ್ರಸಿದ್ದಿಯಾಗಿರುವ ಕೊಡಗಿನ ಈ ಹುತ್ತರಿ ಹಬ್ಬದ ಸಂಭ್ರಮ ನೋಡುವುದೇ ಒಂದು ಸೊಗಸು.