ರಸ್ತೆ ಮಧ್ಯೆ ಇದ್ದಕ್ಕಿದ್ದಂತೆ 20 ಅಡಿ ಹೊಂಡ ಸೃಷ್ಟಿ

|

Updated on: Sep 14, 2024 | 9:55 PM

ರಸ್ತೆಯ ಮಧ್ಯೆ 20 ಅಡಿ ಹೊಂಡ ನಿರ್ಮಾಣಗೊಂಡಿದ್ದರಿಂದ ದಾರಿಹೋಕರು ಆತಂಕಕ್ಕೆ ಒಳಗಾಗಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ ಜಿಎಚ್‌ಎಂಸಿ ಹಾಗೂ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಹೊಂಡ ನಿರ್ಮಾಣವಾದ ರಸ್ತೆಯಲ್ಲಿ ವಾಹನ ಸಂಚಾರವನ್ನು ತಡೆದರು.

ಹೈದರಾಬಾದ್: ತೆಲಂಗಾಣದ ಮಿಯಾಪುರದ ದೀಪ್ತಿಶ್ರೀ ನಗರ ಕಾಲೋನಿಯಲ್ಲಿ ಇದ್ದಕ್ಕಿದ್ದಂತೆ ರಸ್ತೆ ಕುಸಿದಿದೆ. ರಸ್ತೆಯ ಮಧ್ಯೆ 20 ಅಡಿ ಹೊಂಡ ನಿರ್ಮಾಣವಾಗಿ ಸಂಚಾರ ದಟ್ಟಣೆ ಉಂಟಾಗಿತ್ತು. ವಕ್ರವಾದ ರಸ್ತೆಯ ಪಕ್ಕದಲ್ಲಿ ನೀರಿನ ಪೈಪ್‌ಲೈನ್‌ಗಳು ಮತ್ತು ಒಳಚರಂಡಿ ಪೈಪ್‌ಲೈನ್‌ಗಳಿವೆ. ಸ್ಥಳೀಯರ ಮಾಹಿತಿ ಮೇರೆಗೆ ಜಿಎಚ್‌ಎಂಸಿ ಹಾಗೂ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಹೊಂಡ ನಿರ್ಮಾಣವಾದ ರಸ್ತೆಯಲ್ಲಿ ವಾಹನ ಸಂಚಾರವನ್ನು ತಡೆದರು.