ಶಾಸಕ ಮುನಿರತ್ನರನ್ನ ಬೆಂಗಳೂರಿಗೆ ಕರೆತಂದ ಪೊಲೀಸರು
ಬಿಬಿಎಂಪಿ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿರೋ ಕೇಸ್ನಲ್ಲಿ ಬಿಜೆಪಿ ಶಾಸಕ ಮುನಿರತ್ನರನ್ನ ಬಂಧಿಸಲಾಗಿದೆ. ಮುನಿರತ್ನ ನನ್ನನ್ನ ಅವಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಜೊತೆಗೆ ಜೀವ ಬೆದರಿಕೆ ಹಾಕಿದ್ದಾರೆಂದು ಗುತ್ತಿಗೆದಾರ ನಿನ್ನೆ ಆರೋಪಿಸಿದ್ದರು. ಕೋಲಾರದಲ್ಲಿ ಬಂಧಿಸಿರುವ ಪೊಲೀಸರು ಮುನಿರತ್ನರನ್ನ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 14: ಜೀವ ಬೆದರಿಕೆ, ಜಾತಿ ನಿಂದನೆ ಕೇಸ್ನಲ್ಲಿ ಬಿಜೆಪಿ ಶಾಸಕ ಮುನಿರತ್ನರನ್ನ (Munirathna) ಪೊಲೀಸರು ಬಂಧಿಸಿದ್ದಾರೆ. ಕೋಲಾರದಿಂದ ಬೆಂಗಳೂರಿಗೆ ಪೊಲೀಸರು ಕರೆತಂದಿದ್ದಾರೆ. ಈ ವೇಳೆ ಪೊಲೀಸ್ ಜೀಪ್ನಲ್ಲಿ ಮುನಿರತ್ನ ಮಧ್ಯೆ ಕುಳಿತಿದ್ದಾರೆ. ವೈಯಾಲಿಕಾವಲ್ ಠಾಣೆ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಠಾಣೆ ಬಳಿ ಮುನಿರತ್ನ ಅಭಿಮಾನಿಗಳು, ಬೆಂಬಲಿಗರು ಜಮಾಯಿಸಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:39 pm, Sat, 14 September 24