ಇವರು ಹೆಸರು ಕರೆದ ಕೂಡಲೆ ಕೋಳಿಗಳು ಓಡಿಬರುತ್ತವೆ!

ಇವರು ಹೆಸರು ಕರೆದ ಕೂಡಲೆ ಕೋಳಿಗಳು ಓಡಿಬರುತ್ತವೆ!

ಸುಷ್ಮಾ ಚಕ್ರೆ
|

Updated on: Sep 14, 2024 | 7:31 PM

ತೆಲಂಗಾಣದಲ್ಲಿ ಅಪರೂಪದ ಘಟನೆಯೊಂದು ಎಲ್ಲರನ್ನೂ ಬೆರಗಾಗಿಸಿದೆ. ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯ ದುಮ್ಮುಗುಡೆಂ ಮಂಡಲದ ಬೈರಗುಲಪಾಡು ಗ್ರಾಮದ ಕರುಳಲೇಟಿ ನರಸಿಂಹರಾವ್ ಕರೆದರೆ ಸಾಕು ಅವರ ಮನೆಯ ಕೋಳಿಗಳು ಓಡೋಡಿ ಬರುತ್ತವೆ.

ತೆಲಂಗಾಣದ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯ ಕರುಳಲೇಟಿ ನರಸಿಂಹರಾವ್ ಎಂಬ ವ್ಯಕ್ತಿಯ ಮನೆಯಲ್ಲಿ ಸಾಕಷ್ಟು ಕೋಳಿಗಳನ್ನು ಸಾಕಿದ್ದಾರೆ. ಅವರು ಅವಕ್ಕೆಲ್ಲ ಒಂದೊಂದು ಹೆಸರಿಟ್ಟಿದ್ದಾರೆ. ವಿಚಿತ್ರವೆಂದರೆ ಪಿಶಾಚಿ, ದೆವ್ವಗಳ ಹೆಸರನ್ನೇ ಅವರು ಕೋಳಿಗಳಿಗೆ ಇಟ್ಟಿದ್ದಾರೆ. ಈ ವಿಚಿತ್ರವಾದ ಹೆಸರುಗಳನ್ನು ಅವರು ಕರೆದಕೂಡಲೆ ಕೋಳಿಗಳು ಓಡೋಡಿ ಬರುತ್ತವೆ. ಸೈಕಲ್​ನಲ್ಲಿ ಹೋಗುವಾಗಲೂ ಕೋಳಿಗಳು ತಮ್ಮ ಪ್ರೀತಿಯ ಮಾಲೀಕರ ಹಿಂದೆ ಹೋಗುವುದನ್ನು ತಪ್ಪಿಸುವುದಿಲ್ಲ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ