ಒಂದು ಸಮಾಜದ ಬಗ್ಗೆ ಅವಹೇಳನ ಮಾಡುವುದಕ್ಕೆ ಬೆಂಬಲವಿಲ್ಲ; ಮುನಿರತ್ನ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ
ಗುತ್ತಿಗೆದಾರ ಚೆಲುವರಾಜು ಬಿಡುಗಡೆ ಮಾಡಿರುವ ಆಡಿಯೋದಿಂದಾಗಿ ಆರ್ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾತಿ ನಿಂದನೆ ಆರೋಪದಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ನೀಡಿರುವ ಪ್ರತಿಕ್ರಿಯೆ ಇಲ್ಲಿದೆ.
ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ನಾನು ಕೂಡ ಬೆಳಗ್ಗೆಯಿಂದ ಈ ಬಗ್ಗೆ ಸುದ್ದಿ ನೋಡುತ್ತಿದ್ದೇನೆ. ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನನ್ನ ಯಾಕೆ ಕೇಳುತ್ತೀರಿ? ಕಾಂಗ್ರೆಸ್ ನಾಯಕರು ನವರು ಏನು ಮಾಡ್ತಾ ಇದ್ದಾರೆ? ನಾನು ಒಂದು ಸಮಾಜದ ಬಗ್ಗೆ ಅವಹೇಳನ ಮಾಡಲು, ಹಿಂಸೆ ನೀಡಲು ಭ್ರಷ್ಟ ವ್ಯವಸ್ಥೆಗೆ ಬೆಂಬಲ ಕೊಟ್ಟಿಲ್ಲ. ಸರ್ಕಾರ ತನ್ನ ಜವಾಬ್ದಾರಿ ನಿರ್ವಹಣೆ ಮಾಡಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:03 pm, Sat, 14 September 24