‘ನಾನು ದೈವವನ್ನು ನಂಬುವವನು, ದೈವಕ್ಕೆ ಅಪಚಾರ ಆಗಿಲ್ಲ’; ರಿಷಬ್ ಶೆಟ್ಟಿ
‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸಿ ಗೆದ್ದಿದ್ದಾರೆ. ಈ ಚಿತ್ರದಿಂದ ದೈವಕ್ಕೆ ಅಪಚಾರ ಆಗಿದೆ ಎಂದು ಆರೋಪಿಸಲಾಗಿತ್ತು. ಈ ವಿಚಾರಕ್ಕೆ ರಿಷಬ್ ಶೆಟ್ಟಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ದೈವದಿಂದ ನಮಗೆ ಅಪಚಾರ ಆಗಿಲ್ಲ’ ಎಂದು ಅವರು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
‘ಕಾಂತಾರ: ಚಾಪ್ಟರ್ 1’ ಸಿನಿಮಾದಿಂದ ದೈವಕ್ಕೆ ಅಪಚಾರ ಆಗಿದೆ ಎಂಬ ಮಾತಿತ್ತು. ಈ ಬಗ್ಗೆ ರಿಷಬ್ (Rishab Shetty) ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ದೈವವನ್ನು ನಂಬುತ್ತೇನೆ. ಎಲ್ಲಿಯೂ ತಪ್ಪು ಆಗದಂತೆ ಸಿನಿಮಾ ಮಾಡಿದ್ದೇವೆ. ಹಿರಿಯ ಮಾರ್ಗದರ್ಶನದಲ್ಲೇ ಸಿನಿಮಾ ಸಿದ್ಧವಾಗಿದೆ. ಹೇಳುವವರು ಹೇಳುತ್ತಾರೆ. ಅದು ಅವರ ದೃಷ್ಟಿಕೋನ. ನಾವು ಅಂದುಕೊಡಂತೆ ಸಿನಿಮಾ ತಂದಿದ್ದೇವೆ’ ಎಂದು ರಿಷಬ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Oct 16, 2025 11:27 AM
