ಮಂತ್ರಿಗಳೇನು ಸಿಎಂ ಗುಲಾಮರಾ?: ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಕಿಡಿ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಕಿಡಿ ಕಾರಿದ್ದಾರೆ. ಯಾವುದೇ ಮಾನದಂಡವಿಲ್ಲದೆ ಮಹಿಳೆಯರಿಗೆ ಪ್ರತಿತಿಂಗಳು 2 ಸಾವಿರ ರೂಪಾಯಿ ಹಣ ನೀಡುತ್ತಿರೋದನ್ನ ಆಕ್ಷೇಪಿಸಿರುವ ಅವರು, ಮಂತ್ರಿಗಳೇನು ಸಿಎಂ ಸಿದ್ದರಾಮಯ್ಯ ಅವರ ಗುಲಾಮರಾಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಮೈಸೂರು, ಅಕ್ಟೋಬರ್ 16: ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ ಸೇರಿ ಎಲ್ಲದಕ್ಕೂ ಮಾನದಂಡಗಳಿವೆ. ಹೀಗಿರುವಾಗ ಯಾವುದಾದರೂ ಹುಚ್ಚ ಮಹಿಳೆಯರಿಗೆ ಯಾವ ಮಾನದಂಡವಿಲ್ಲದೆ ಪ್ರತಿ ತಿಂಗಳು 2 ಸಾವಿರ ಹಣ ಕೊಡುತ್ತಾನಾ ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ವಾಗ್ದಾಳಿ ನಡೆಸಿರುವ ಅವರು, ನಿನ್ನ ಹೆಂಡತಿಗೂ ಫ್ರೀ, ನನ್ನ ಹೆಂಡಿತಿಗೂ ಫ್ರೀ ಅಂತಾರೆ. ಇದು ಯಾರ ಅಪ್ಪನ ಮನೆ ದುಡ್ಡಲ್ಲ ಸಿದ್ದರಾಮಯ್ಯನವರೇ, ಜನರ ತೆರಿಗೆ ಹಣ. ಈ ಮಂತ್ರಿಗಳೆಲ್ಲ ಯಾಕೆ ಬಾಯಿಮುಚ್ಚಿ ಕುಳಿತಿದ್ದಾರೋ ಗೊತ್ತಿಲ್ಲ. ಮಂತ್ರಿಗಳೇನು ಸಿಎಂ ಗುಲಾಮರಾ ಎಂದು ವಿಶ್ವನಾಥ್ ಕಿಡಿ ಕಾರಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಗೆಳೆಯ ವಾಸುಕಿ ವೈಭವ್ ಕಾನ್ಸರ್ಟ್ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್ಒ ಸೇತುವೆ
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು

