‘ಸಾಯೋ ದಿನ ಬೆಳಿಗ್ಗೆಯೂ ಚಂದುಗೆ ಕರೆ ಮಾಡಿದ್ದೆ’; ಪವಿತ್ರಾ ಮಗನ ಹೇಳಿಕೆ

Updated on: May 20, 2024 | 8:30 AM

‘ಚಂದು ಅವರು ಶಾಕ್ ಹಾಗೂ ದುಃಖದಲ್ಲಿ ಇದ್ದರು. ಸಾಯೋ ದಿನ ಬೆಳಿಗ್ಗೆಯೂ ನಾನು ಕಾಲ್ ಮಾಡಿದ್ದೆ. ಆದರೆ, ಅವರು ಕರೆ ಸ್ವೀಕರಿಸಲಿಲ್ಲ. ಅಮ್ಮನ ಅಂತ್ಯಕ್ರಿಯೆ ದಿನ ನಮ್ಮ ಜೊತೆಯೇ ಇದ್ದರು. ಹೊರಡುವಾಗ ನಮ್ಮ ಜೊತೆ ಮಾತನಾಡಿದ್ದರು’ ಎಂದಿದ್ದಾರೆ ಪವಿತ್ರಾ ಮಗ ಪ್ರಜ್ವಲ್.

ಕಿರುತೆರೆ ನಟಿ ಪವಿತ್ರಾ ಅವರು ಅಪಘಾತದಲ್ಲಿ ಮೃತಪಟ್ಟರೆ ಅವರ ಜೊತೆಗಿದ್ದ ಗೆಳೆಯ ಚಂದು ಆತ್ಮಹತ್ಯೆ ಮಾಡಿಕೊಂಡು ನಿಧನ ಹೊಂದಿದ್ದಾರೆ. ಇದು ನಿಜಕ್ಕೂ ಶಾಕಿಂಗ್ ಎನಿಸಿದೆ. ಪವಿತ್ರಾ ಮಗ ಪ್ರಜ್ವಲ್ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ‘ಚಂದು (Chandu) ಅವರು ಶಾಕ್ ಹಾಗೂ ದುಃಖದಲ್ಲಿ ಇದ್ದರು. ಸಾಯೋ ದಿನ ಬೆಳಿಗ್ಗೆಯೂ ನಾನು ಕಾಲ್ ಮಾಡಿದ್ದೆ. ಆದರೆ, ಅವರು ಕರೆ ಸ್ವೀಕರಿಸಲಿಲ್ಲ. ಅಮ್ಮನ ಅಂತ್ಯಕ್ರಿಯೆ ದಿನ ನಮ್ಮ ಜೊತೆಯೇ ಇದ್ದರು. ಹೊರಡುವಾಗ ನಮ್ಮ ಜೊತೆ ಮಾತನಾಡಿದರು. ಹೈದರಾಬಾದ್​ನಲ್ಲಿ ಯಾರಿಲ್ಲ ಎಂದರು ನಾನಿದ್ದೇನೆ ಎಂದು ಧೈರ್ಯ ತುಂಬಿದ್ದರು. ಎರಡು ಮೂರು ದಿನ ಚೆನ್ನಾಗಿಯೇ ಇದ್ದರು. ಆಸ್ಪತ್ರೆಗೆ ಹೋಗಿದ್ದೀನಿ ಎಂದೆಲ್ಲ ಹೇಳುತ್ತಿದ್ದರು. ಈ ತರ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ’ ಎಂದಿದ್ದಾರೆ ಪ್ರಜ್ವಲ್. ಚಂದು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದು ಅವರಿಗೆ ಬೇಸರ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More