ವಿಜಯಲಕ್ಷ್ಮೀ ಜೊತೆಗೆ ಬಂದು ಡಿಕೆಶಿನ ಮೀಟ್ ಮಾಡಿದ್ದೇಕೆ? ಬೇರೆಯದೇ ಉತ್ತರ ಕೊಟ್ಟ ಜೋಗಿ ಪ್ರೇಮ್

ವಿಜಯಲಕ್ಷ್ಮೀ ಜೊತೆಗೆ ಬಂದು ಡಿಕೆಶಿನ ಮೀಟ್ ಮಾಡಿದ್ದೇಕೆ? ಬೇರೆಯದೇ ಉತ್ತರ ಕೊಟ್ಟ ಜೋಗಿ ಪ್ರೇಮ್

ರಾಜೇಶ್ ದುಗ್ಗುಮನೆ
|

Updated on: Jul 24, 2024 | 2:18 PM

ಬುಧವಾರ (ಜುಲೈ 24) ವಿಜಯಲಕ್ಷ್ಮಿ ಅವರನ್ನು ಭೇಟಿ ಮಾಡುತ್ತೇನೆ’ ಎಂದು ಡಿಕೆಶಿ ಹೇಳಿದ್ದರು. ಅದೇ ರೀತಿ ದರ್ಶನ್ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಸಹೋದರ ದಿನಕರ್ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ಅವರು ಇಂದು ಡಿಕೆಶಿ ಮನೆಗೆ ತೆರಳಿದ್ದಾರೆ.

ದರ್ಶನ್ ಪ್ರಕರಣದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅವರು ಸದ್ಯ ಜೈಲಿನಲ್ಲಿ ಇದ್ದಾರೆ. ಕೇಂದ್ರ ಕಾರಾಗೃಹದಲ್ಲಿ ಅವರನ್ನು ಇಡಲಾಗಿದೆ. ಈ ಸಂದರ್ಭದಲ್ಲಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಯಾರನ್ನೇ ಭೇಟಿ ಮಾಡಿದರೂ ಸಾಕಷ್ಟು ಚರ್ಚೆ ಆಗುತ್ತದೆ. ಈಗ ವಿಜಯಲಕ್ಷ್ಮಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಮೀಟ್ ಮಾಡಿದ್ದಾರೆ. ವಿಜಯಲಕ್ಷ್ಮೀ ಜೊತೆ ಜೋಗಿ ಪ್ರೇಮ್ ಕೂಡ ಇದ್ದರು. ದರ್ಶನ್ ಹಾಗೂ ರಕ್ಷಿತಾ ಪ್ರೇಮ್ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಪತ್ನಿಯ ಪರವಾಗಿ ಜೋಗಿ ಪ್ರೇಮ್ ಅವರು ಡಿಕೆಶಿ ಬಳಿ ತೆರಳಿದರೇ ಎನ್ನುವ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ‘ನಾನು ಆಗಾಗ ಡಿಕೆಶಿ ಅವರನ್ನು ಭೇಟಿ ಮಾಡುತ್ತಾ ಇರುತ್ತೇನೆ. ದರ್ಶನ್ ನನ್ನ ಸ್ನೇಹಿತರು, ಅವರು ಕುಟುಂಬದವರು ಇದ್ದಂತೆ. ನನ್ನ ಮಗನನ್ನು ಅವರ ಶಾಲೆಗೆ ಸೇರಿಸೋ ಬಗ್ಗೆ ಮಾತನಾಡಲು ಬಂದಿದ್ದೆ. ಇದನ್ನು ಬಿಟ್ಟು ಬೇರೆ ಏನೂ ಮಾತನಾಡಿಲ್ಲ’ ಎಂದಿದ್ದಾರೆ ಜೋಗಿ ಪ್ರೇಮ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.