ಪ್ರಧಾನಿ ಮೋದಿಯವರನ್ನು ಸ್ವಾಗತಿಸುವ ಪ್ರೋಟೊಕಾಲ್ ಬಗ್ಗೆ ಕೇಳಿದ ಹಲವಾರು ಪ್ರಶ್ನೆಗಳಿಗೆ ಗೃಹ ಸಚಿವ ಪರಮೇಶ್ವರ್ ಗೊತ್ತಿಲ್ಲ ಎಂದುತ್ತರಿಸಿದರು!

|

Updated on: Aug 26, 2023 | 6:47 PM

ಇಂಥ ವಿಷಯಯಗಳನ್ನು ಡಿಪಿಎಅರ್ ಇಲಾಖೆ ನೋಡಿಕೊಳ್ಳುತ್ತದೆ ಮತ್ತು ಆ ಇಲಾಖೆ ಮುಖ್ಯಮಂತ್ರಿಗಳ ಸುಪರ್ದಿಯಲ್ಲಿರುತ್ತದೆ. ಮುಖ್ಯಮಂತ್ರಿಗಳು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ. ಹಾಗೇನಾದರೂ ಇದ್ದರೆ ಅಧಿಕಾರಿಗಳು ತಮಗೆ ಲಿಖಿತ ರೂಪದಲ್ಲಿ ತಿಳಿಸಿರುತ್ತಿದ್ದರು ತಾನು ವಿಮಾನ ನಿಲ್ದಾಣಕ್ಕೆ ಹೋಗಿರುತ್ತಿದ್ದೆ ಎಂದು ಸಚಿವ ಪರಮೇಶ್ವರ್ ಹೇಳಿದರು.

ಬೆಂಗಳೂರು: ಇಂದು ಬೆಳಗ್ಗೆ ನಗರಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ಸ್ವಾಗತಿಸಲು ರಾಜ್ಯ ಸರ್ಕಾರದ ಪ್ರತಿನಿಧಿಗಳಾಗಿ ಯಾರೂ ಹೋಗದಿರುವುದು ವಿವಾದ ಸೃಷ್ಟಿಸಿದೆ. ಇದೇ ವಿಷಯದ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಅವರನ್ನು ಕೇಳಿದ ಹೆಚ್ಚಿನ ಪ್ರಶ್ನೆಗಳಿಗೆ ಅವರು ಗೊತ್ತಿಲ್ಲ ಎಂದು ಉತ್ತರಿಸಿದರು. ಇದಕ್ಕೂ ಮೊದಲು ಹಲವಾರು ಸಲ ಮಿನಿಸ್ಟರ್-ಇನ್-ವೇಟಿಂಗ್ (minister-in-waiting) ಅಗಿ ದೇಶ ವಿದೇಶಗಳ ಗಣ್ಯರನ್ನು ಸ್ವಾಗತಿಸಲು ಹೋಗಿರುವುದಾಗಿ ಹೇಳಿದ ಪರಮೇಶ್ವರ್, ಪ್ರಧಾನಿಗಳನ್ನು ಸ್ವಾಗತಿಸಲು ನೇಮಕ ಮಾಡಿದ ಬಗ್ಗೆ ಯಾರೂ ತಮಗೆ ತಿಳಿಸಿಲ್ಲ ಎಂದರು. ಇಂಥ ವಿಷಯಯಗಳನ್ನು ಡಿಪಿಎಅರ್ ಇಲಾಖೆ ನೋಡಿಕೊಳ್ಳುತ್ತದೆ ಮತ್ತು ಆ ಇಲಾಖೆ ಮುಖ್ಯಮಂತ್ರಿಗಳ ಸುಪರ್ದಿಯಲ್ಲಿರುತ್ತದೆ. ಮುಖ್ಯಮಂತ್ರಿಗಳು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ. ಹಾಗೇನಾದರೂ ಇದ್ದರೆ ಅಧಿಕಾರಿಗಳು ತಮಗೆ ಲಿಖಿತ ರೂಪದಲ್ಲಿ ತಿಳಿಸಿರುತ್ತಿದ್ದರು ತಾನು ವಿಮಾನ ನಿಲ್ದಾಣಕ್ಕೆ ಹೋಗಿರುತ್ತಿದ್ದೆ ಎಂದು ಸಚಿವ ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on