Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಮಾರಸ್ವಾಮಿ ಸಂಪುಟದಲ್ಲಿ ಗೃಹ ಸಚಿವನಾಗಿದ್ದಾಗ ಅವರು ನೀಡುತ್ತಿದ್ದ ಸಲಹೆ-ಸೂಚನೆಗಳನ್ನು ಬಹಿರಂಗಗೊಳಿಸುವುದು ಸರಿಯಲ್ಲ: ಜಿ ಪರಮೇಶ್ವರ್

ಕುಮಾರಸ್ವಾಮಿ ಸಂಪುಟದಲ್ಲಿ ಗೃಹ ಸಚಿವನಾಗಿದ್ದಾಗ ಅವರು ನೀಡುತ್ತಿದ್ದ ಸಲಹೆ-ಸೂಚನೆಗಳನ್ನು ಬಹಿರಂಗಗೊಳಿಸುವುದು ಸರಿಯಲ್ಲ: ಜಿ ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 04, 2023 | 1:50 PM

ಸರ್ಕಾರ ತಮ್ಮದು ಮತ್ತು ತಮಗೆ ಸರಿಯೆನಿಸಿದ ರೀತಿಯಲ್ಲಿ ವರ್ಗಾವಣೆಗಳನ್ನು ಮಾಡಲಾಗುತ್ತದೆ. ಯಾವ ಇನ್ಸ್ ಪೆಕ್ಟರ್ ಅನ್ನು ಯಾವ ಜಾಗಕ್ಕೆ ಟ್ರಾನ್ಸ್ ಫರ್ ಮಾಡಿದರೆ ಸೂಕ್ತ ಅಂತ ಇಲಾಖೆಗೆ ಗೊತ್ತಿರುತ್ತದೆ ಎಂದು ಪರಮೇಶ್ವರ್ ಹೇಳಿದರು.

ಬೆಂಗಳೂರು: ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಹೇಳಿಕೆಗಳನ್ನು ನೀಡುವಾಗ ಸಾಮಾನ್ಯವಾಗಿ ವಿರೋಧ ಪಕ್ಷದ ನಾಯಕರನ್ನು ಟೀಕಿಸುವುದಿಲ್ಲ. ಆ ನಾಯಕರು ಮಾಡಿದ ಕಾಮೆಂಟ್ ಅಥವಾ ಸರಿ ಯೆನ್ನಿಸದಿದ್ದರೆ ಮಾತ್ರ ಜವಾಬು ನೀಡುತ್ತಾರೆ. ವಿದೇಶದಿಂದ ವಾಪಸ್ಸು ಬಂದಿರುವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಸರ್ಕಾರದ ವಿರುದ್ಧ ಶುರುಮಾಡಿದ್ದು ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ (police inspector transfers) ವಿಷಯವನ್ನೂ ಗುರಿಯಾಗಿಸಿಕೊಂಡಿದ್ದಾರೆ. ಹಾಗಾಗೇ, ಪರಮೇಶ್ವರ್, ಕುಮಾರಸ್ವಾಮಿಯವರ ಅರೋಪಕ್ಕೆ ಪಾಯಿಂಟೆಡ್ ಉತ್ತರಗಳನ್ನು ನೀಡಿದ್ದಾರೆ. ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಬೇರೆಯವರು ಮಾಡುವ ಟೀಕೆಗಳ ಬಗ್ಗೆ ಯೋಚಿಸುವ ಅಗತ್ಯವಿಲ್ಲ, ಸರ್ಕಾರ ತಮ್ಮದು ಮತ್ತು ತಮಗೆ ಸರಿಯೆನಿಸಿದ ರೀತಿಯಲ್ಲಿ ವರ್ಗಾವಣೆಗಳನ್ನು ಮಾಡಲಾಗುತ್ತದೆ. ಯಾವ ಇನ್ಸ್ ಪೆಕ್ಟರ್ ಅನ್ನು ಯಾವ ಜಾಗಕ್ಕೆ ಟ್ರಾನ್ಸ್ ಫರ್ ಮಾಡಿದರೆ ಸೂಕ್ತ ಅಂತ ಇಲಾಖೆಗೆ ಗೊತ್ತಿರುತ್ತದೆ, ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ಲೋಪವಾಗಬಾರದು ಎಂಬ ದೃಷ್ಟಿಕೋನದಿಂದ ವರ್ಗಾವಣೆಗಳನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ತಾನು ಗೃಹ ಸಚಿವನಾಗಿದ್ದೆ, ಆಗ ಅವರು ನೀಡುತ್ತಿದ್ದ ಸಲಹೆ ಸೂಚನೆಗಳನ್ನು ತಾನೆಲ್ಲೂ ಹೇಳಿಕೊಂಡಿಲ್ಲ, ಅದು ಸರಿ ಕೂಡ ಅಲ್ಲ ಎಂದು ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ