Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಐಎನಲ್ಲಿ ಅಕಸ್ಮಿಕವಾಗಿ ಭೇಟಿಯಾದ ಬಿಎಸ್ ಯಡಿಯೂರಪ್ಪ, ಡಿಕೆ ಶಿವಕುಮಾರ್; ಪರಸ್ಪರ ಯೋಗಕ್ಷೇಮ ವಿಚಾರಿಸಿದ ಗಣ್ಯರು

ಕೆಐಎನಲ್ಲಿ ಅಕಸ್ಮಿಕವಾಗಿ ಭೇಟಿಯಾದ ಬಿಎಸ್ ಯಡಿಯೂರಪ್ಪ, ಡಿಕೆ ಶಿವಕುಮಾರ್; ಪರಸ್ಪರ ಯೋಗಕ್ಷೇಮ ವಿಚಾರಿಸಿದ ಗಣ್ಯರು

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 04, 2023 | 12:54 PM

ಶಿವಕುಮಾರ್ ಮತ್ತು ಯಡಿಯೂರಪ್ಪ ಬದ್ಧವೈರತ್ವವಿರುವ ಪಕ್ಷಗಳ ಸದಸ್ಯರಾದರೂ ಇಬ್ಬರ ನಡುವೆ ಉತ್ತಮ ಸ್ನೇಹ ಮತ್ತು ಬಾಂಧವ್ಯವಿದೆ.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ (DK Shivakumar) ಇಂದು ಅಕಸ್ಮಿಕವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೇಟಿಯಾದರು. ನಿಮಗೆ ಗೊತ್ತಿದೆ, ಶಿವಕುಮಾರ್ ಕಳೆದೆರಡು ಮೂರು ದಿನಗಳಿಂದ ದೆಹಲಿಯಲ್ಲಿದ್ದರು. ಹೈಕಮಾಂಡ್ (Congress high command) ನಡೆಸಿದ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಕೇಂದ್ರ ಜಲಸಂಪನ್ಮೂಲ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಇಂದು ಬೆಳಗ್ಗೆ ನಗರಕ್ಕೆ ವಾಪಸ್ಸಾದರು. ಯಡಿಯೂರಪ್ಪ ಕಳೆದ ಕೆಲ ದಿನಗಳಿಂದ ವಿದೇಶ ಪ್ರವಾಸದಲ್ಲಿದ್ದರು. ಅವರು ಸಹ ಇಂದು ತಮ್ಮ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ಸಾದರು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಅವರು ದುಬೈನಿಂದ ಸ್ವದೇಶಕ್ಕೆ ವಾಪಸ್ಸಾದರು. ಶಿವಕುಮಾರ್ ಮತ್ತು ಯಡಿಯೂರಪ್ಪ ಬದ್ಧವೈರತ್ವವಿರುವ ಪಕ್ಷಗಳ ಸದಸ್ಯರಾದರೂ ಇಬ್ಬರ ನಡುವೆ ಉತ್ತಮ ಸ್ನೇಹ ಮತ್ತು ಬಾಂಧವ್ಯವಿದೆ. ಗಣ್ಯರಿಬ್ಬರು ಏರ್ಪೋಟ್ ನಲ್ಲಿ ಕೈಕುಲುಕಿ ಉಭಯಕುಶಲೋಪರಿ ನಡೆಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ