Bengaluru News: ಮುಂದಿನ ಅವಧಿಗೆ ಸಿಎಂ ಹುದ್ದೆ ರೇಸ್​ನಲ್ಲಿರುವೆ ಅಂತ ನಾನು ಹೇಳಿದ್ದು, ಈಗಲ್ಲ: ಸತೀಶ್ ಜಾರಕಿಹೊಳಿ, ಸಚಿವ

Bengaluru News: ಮುಂದಿನ ಅವಧಿಗೆ ಸಿಎಂ ಹುದ್ದೆ ರೇಸ್​ನಲ್ಲಿರುವೆ ಅಂತ ನಾನು ಹೇಳಿದ್ದು, ಈಗಲ್ಲ: ಸತೀಶ್ ಜಾರಕಿಹೊಳಿ, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 28, 2023 | 4:19 PM

ಮುಂದಿನ ಅವಧಿ ಅಂದಾಕ್ಷಣ ಗೊಂದಲಕ್ಕೆ ಬೀಳುವುದು ಬೇಡ, ಸತೀಶ್ ಜಾರಕಿಹೊಳಿ ಹೇಳುತ್ತಿರುವ ಮುಂದಿನ ಅವಧಿ 2028 ರ ವಿಧಾನಸಭಾ ಚುನಾವಣೆ ನಂತರ!

ಬೆಂಗಳೂರು: ಸಿದ್ದರಾಮಯ್ಯ (Siddaramaiah) ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದವರಿಯುತ್ತಾರೋ ಅಥವಾ ಅರ್ಧಾವಧಿ ಮುಗಿದ ಬಳಿಕ ಬದಲಾಯಿಸಲಾಗುತ್ತೋ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿಬಿಟ್ಟಿದೆ ಮಾರಾಯ್ರೇ, ಬೆಂಗಳೂರಲ್ಲಿ ಇಂದು ಸುದ್ದಿಗಗೋಷ್ಟಿ ನಡೆಸಿ ಮಾತಾಡಿದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ (Sarish Jarkiholi) ಅದನ್ನು ಹೈಕಮಾಂಡ್ (high command) ನಿರ್ಧರಿಸುತ್ತದೆ, ಕೆಲ ಜನರ ಮರ್ಜಿಗೆ ತಕ್ಕಂತೆ ನಡೆಯುವ ಪಾರ್ಟಿ ನಮ್ಮದಲ್ಲ ಎದು ಹೇಳಿದರು. ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿ ಹುದ್ದೆಯ ರೇಸಲ್ಲಿರುವುದಾಗಿ ಸತೀಶ್ ಹೇಳಿದ್ದರು. ಅದನ್ನು ಪತ್ರಕರ್ತರು ಪ್ರಸ್ತಾಪಿಸಿದಾಗ ತಾನು ಹೇಳಿದ್ದು ಮುಂದಿನ ಅವಧಿಗೆ ಅಂತ ಅವರು ಹೇಳಿದರು. ಮುಂದಿನ ಅವಧಿ ಅಂದಾಕ್ಷಣ ನೀವು ಗೊಂದಲಕ್ಕೆ ಬೀಳಬೇಡಿ, ಅವರು ಹೇಳುತ್ತಿರುವ ಮುಂದಿನ ಅವಧಿ 2028 ರ ವಿಧಾನಸಭಾ ಚುನಾವಣೆ ನಂತರ! ಆಗಲೂ ಕಾಂಗ್ರೆಸ್ ಗೆದ್ದು ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ಸತೀಶ್ ಜಾರಕಿಕೊಳಿ ಅವರಿಗಿರುವಂತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ