Loading video

ನಮ್ಮ ಮೇಲೆ ವಾಹನ ಹತ್ತಿಸುವಂತೆ ಯಾರೋ ಒಬ್ಬರು ಹೇಳುತ್ತಿದ್ದರು: ಜ್ಯೋತಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ

|

Updated on: Feb 11, 2025 | 6:37 PM

ತಾವು ನೀಡಿರುವ ದೂರಿನ ಆಧಾರದಲ್ಲಿ ದಾಖಲಾಗಿರುವ ಎಫ್​ಐಅರ್ ನಲ್ಲಿ ಎಲ್ಲ ವಿವರಗಳು ಲಭ್ಯವಾಗುತ್ತವೆ ಎಂದು ಅಧಿಕಾರಿ ಜ್ಯೋತಿ ಹೇಳುತ್ತಾರೆ. ಅದರೆ ಫೋನಲ್ಲಿ ಅವರ ವಿರುದ್ಧ ಬಸವೇಶ್ ಬಳಸಿದ ಭಾಷೆ, ಪದಗಳು ಹೇವರಿಕೆ ಹುಟ್ಟಿಸುತ್ತವೆ. ವೈರಲ್ ಆಗಿರುವ ಆ ವಿಡಿಯೋವನ್ನು ಕನ್ನಡಿಗರು ನೋಡಿದ್ದಾರೆ. ಘಟನೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದುವರೆಗೆ ಹೇಳಿಕೆಯನ್ನು ನೀಡಿಲ್ಲ.

ಶಿವಮೊಗ್ಗ: ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ಭದ್ರಾವತಿ ಶಾಸಕ ಬಿಕೆ ಸಂಗಮೇಶ್ ಮಗ ಬಸವೇಶ್ ವಿರುದ್ಧ ದೂರು ನೀಡಿ ಎಫ್​ಐಆರ್ ದಾಖಲಾದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ತಾನು ಹೋದ ಸ್ಥಳದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು, ಅದನ್ನು ಪ್ರಶ್ನಿಸಲು ಹೋದಾಗ ಮಾತಿನ ಚಕಮಕಿ ನಡೆಯಿತು, ಅಲ್ಲಿದ್ದವರಲ್ಲಿ ಯಾರೋ ಒಬ್ಬರು ಅವರ ಮೇಲೆ ವಾಹನನ ಹತ್ತಿಸಿ ಅಂತ ಕೂಗಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಮನಗಂಡು ತಮ್ಮ ಸಿಬ್ಬಂದಿಯನ್ನು ಅಲ್ಲಿಂದ ಕರೆತಂದಿದ್ದಾಗಿ ಜ್ಯೋತಿ ಹೇಳಿದರು. ಬಸವೇಶ್ ಫೋನಲ್ಲಿ ತಮ್ಮನ್ನು ಅವಾಚ್ಯ ಪದಗಳಲ್ಲಿ ನಿಂದಿಸಿದರ ಬಗ್ಗೆ ಅವರು ಹೇಳಲಿಲ್ಲ, ದೂರು ನೀಡಿದ ಬಳಿಕ ತಮಗೆ ಬೆದರಿಕೆ ಕರೆಗಳು ಬಂದಿಲ್ಲ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಶಾಸಕ ಸಂಗಮೇಶ್ ಮಗ ಬಸವೇಶ್ ವಿರುದ್ಧ ದೂರು ದಾಖಲಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ