ಶಾಸಕ ಸಂಗಮೇಶ್ ಮಗ ಬಸವೇಶ್ ವಿರುದ್ಧ ದೂರು ದಾಖಲಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ
ಬಸವೇಶ್ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆ ಕ್ರಮ ಜರುಗಿಸುತ್ತದೆ, ಸರ್ಕಾರವೇನೂ ಮಧ್ಯೆ ಪ್ರವೇಶಿಸಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಬಸವೇಶ್ ದೂರು ದಾಖಲಾಗುತ್ತಿರುವುದು ಇದು ಮೊದಲ ಸಲವೇನಲ್ಲ, 2021ರಲ್ಲಿ ಭದ್ರಾವತಿಯಲ್ಲಿ ಕಬಡ್ಡಿ ಟೂರ್ನಿಯೊಂದು ನಡೆಯುತ್ತಿದ್ದಾಗ ಘಟಿಸಿದ ಹಲ್ಲೆ ಪ್ರಕರಣದಲ್ಲಿ ಅವನ ವಿರುದ್ಧ ಎಫ್ಐಅರ್ ದಾಖಲಾಗಿ ಬಂಧನವೂ ಆಗಿತ್ತು.
ಶಿವಮೊಗ್ಗ: ಭದ್ರಾವತಿಯ ಶಾಸಕ ಬಿಕೆ ಸಂಗಮೇಶ್ ಅವರ ಮಗ ಬಸವೇಶ್ ನಿಂದ ಅಧಿಕಾರಿ ನಿಂದನೆ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆ ನಡೆಯುವುದು ನಿಶ್ಚಿತವಾಗಿದೆ. ಬಸವೇಶನಿಂದ ನಿಂದನೆಗೊಳಗಾದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಜ್ಯೋತಿ ಅವರು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದಾರೆ. ದೂರು ಸಲ್ಲಿಸಿದ ಬಳಿಕ ಪೊಲೀಸರು ಜ್ಯೋತಿ ಅವರನ್ನು ಭದ್ರಾವತಿಯ ಡಿವೈಎಸ್ಪಿ ಕಚೇರಿಗೆ ಕರೆದೊಯ್ದು ಹೇಳಿಕೆಯನ್ನು ದಾಖಲಿಸಿಕೊಂಡರು. ಅಧಿಕಾರಿಯನ್ನು ಪೊಲೀಸ್ ಜೀಪಲ್ಲಿ ಕರೆದೊಯ್ಯುತ್ತಿರುವ ದೃಶ್ಯಗಳನ್ನು ಇಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹಿಳಾ ಅಧಿಕಾರಿಗೆ ಸೊಂಟದ ಕೆಳಗಿನ ಪದ ಬಳಿಸಿದ ಕಾಂಗ್ರೆಸ್ ಶಾಸಕನ ಪುತ್ರ