ಕೋವಿಡ್ ಸಮಯದಲ್ಲಿ ದೋಚಿದ ಹಣವನ್ನು ಡಾ ಸುಧಾಕರ್ ಮೈಕ್ರೋ ಫೈನಾನ್ಸ್ ನಲ್ಲಿ ತೊಡಗಿಸಿದ್ದಾರೆ: ಸಂದೀಪ್ ರೆಡ್ಡಿ, ಬಿಜೆಪಿ ಮುಖಂಡ
ವಿಧಾನಸಭಾ ಚುನಾವನೆಯಲ್ಲಿ ಸುಧಾಕರ್ ವಿರುದ್ಧ ಏನೂ ಅಲ್ಲದ ಅನಾಥ ಹುಡುಗ ಪ್ರದೀಪ್ ಈಶ್ವರ್ ಗೆದ್ದರು, ಅವರು ಕಾಂಗ್ರೆಸ್ ಪಕ್ಷದವರಾದರೇನಂತೆ? ಇದು ಪ್ರಜಾಪ್ರಭುತ್ವ ವ್ಯವಸ್ಥೆ, ಈಶ್ವರ್ ಗೆಲುವನ್ನು ನಾವು ಅಂಗೀಕರಿಸಲೇಬೇಕು ಎಂದು ಸಂದೀಪ್ ರೆಡ್ಡಿ ಹೇಳಿದರು. ತಮ್ಮ ಜೊತೆಯಲ್ಲಿರುವ ಕಾರ್ಯಕರ್ತರು ಬದುಕಿನಲ್ಲಿ ಮುಂದೆ ಬರೋದು ಸುಧಾಕರ್ ಗೆ ಸಹಿಸಲಾಗಲ್ಲ, ಅವರ ಏಳ್ಗೆಗೆ ಕೊಕ್ಕೆ ಹಾಕುತ್ತಾರೆ ಎಂದು ರೆಡ್ಡಿ ಹೇಳಿದರು.
ಚಿಕ್ಕಬಳ್ಳಾಪುರ: ಜಿಲ್ಲೆಯ ಬಿಜೆಪಿ ಅಧ್ಯಕ್ಷನಾಗಿ ಸಂದೀಪ್ ರೆಡ್ಡಿಯನ್ನು ಆರಿಸಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಕೂಗಾಡಿದ್ದ ಸಂಸದ ಡಾ ಕೆ ಸುಧಾಕರ್ ಅಯ್ಕೆಯನ್ನು ತಡೆಹಿಡಿಸಿದ್ದಾರೆರ. ಇವತ್ತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ರೆಡ್ಡಿ, ಸುಧಾಕರ್ ವಿರುದ್ಧ ಹತ್ತು ಹಲವು ಅರೋಪಗಳನ್ನು ಮಾಡಿದರು. ಸಂಸದ ವಿರುದ್ಧ ಏಕವಚನದಲ್ಲಿ ಮಾತಾಡಿರುವ ರೆಡ್ಡಿ, ಅವರು ತನಗೆ ಮಾಡಿದ ಅನ್ಯಾಯಗಳನ್ನು ಇನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ, ತನಗೂ ಕುಟುಂಬ ಅಂತ ಇದೆ, ತಾವೂ ಬದುಕಬೇಕಿದೆ, ಸುಧಾಕರ್ ಗೆ ಮಾತ್ರ ಸಂಸಾರ ಇಲ್ಲ ಎಂದು ಹೇಳಿದ್ದಾರೆ. ಕೊವಿಡ್ ಸಮಯದಲ್ಲಿ ಜನ ಸಾಯುತ್ತಿದ್ದರೂ ಸುಧಾಕರ್ ಮಾತ್ರ ಹಣ ದೋಚಿಕೊಂಡು ಚೆನೈ ಮೂಲದ ಮೈಕ್ರೋ ಫೈನಾನ್ಸ್ ಕಂಪನಿಯೊಂದರಲ್ಲಿ ತೊಡಗಿಸಿರುವುದನ್ನು ತಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳುತ್ತೇನೆ ಸುಧಾಕರ್ ಸಹ ಪ್ರಮಾಣ ಮಾಡಲಿ ನೋಡೋಣ ಎಂದು ರೆಡ್ಡಿ ಸವಾಲೆಸೆದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮುಖ ನೋಡದ ಡಾ ಕೆ ಸುಧಾಕರ್ ಮತ್ತು ಪ್ರದೀಪ್ ಈಶ್ವರ್!