ಗುತ್ತಿಗೆದಾರರು ಯಾರಿಗಾದರೂ ದೂರು ನೀಡಲಿ, ನಿಯಮಾವಳಿಯನ್ನು ಬಿಟ್ಟು ಬಿಲ್ ರಿಲೀಸ್ ಮಾಡೋದಿಲ್ಲ: ಡಿಕೆ ಶಿವಕುಮಾರ್, ಡಿಸಿಎಂ

|

Updated on: Aug 08, 2023 | 2:53 PM

ಸಾವಿರ ಕೋಟಿ ಮೊತ್ತದ ಕಾಮಗಾರಿಯನ್ನು ಒಂದು ತಿಂಗಳಲ್ಲಿ ಮಾಡಿದವರಿಗೆ ಬಿಲ್ ರಿಲೀಸ್ ಮಾಡಲಾಗುತ್ತಾ ಎಂದು ಕೇಳಿದ ಶಿವಕುಮಾರ್, ಗುತ್ತಿಗೆದಾರರು ಸಂಬಂಧಪಟ್ಟ ಅಧಿಕಾರಿಯಿಂದ ಕಾಮಗಾರಿ ಸಮರ್ಪಕವಾಗಿ ಅಗಿದೆ ಅಂತ ಪ್ರಮಾಣ ಪತ್ರ ತರಲಿ, ಬಿಲ್ ತಾನಾಗೇ ರಿಲೀಸ್ ಆಗುತ್ತದೆ ಎಂದರು.

ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರು ನಡೆಸಿರುವ ಬಿಲ್ ಬಿಡುಗಡೆಗೆ (bill release) ಹಣದ ಬೇಡಿಕೆ ಇಟ್ಟಿದ್ದಾರೆ ಅಂತ ಗುತ್ತಿಗೆದಾರರ ಸಂಘ (contractors association) ಮಾಡಿರುವ ಅರೋಪವನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಳ್ಳಿಹಾಕಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಶಿವಕುಮಾರ್ ತಾವು ಯಾರ ಮೇಲೆಯೂ ಆಣೆ ಪ್ರಮಾಣ ಮಾಡುವ ಅವಶ್ಯಕತೆಯಿಲ್ಲ, ಗುತ್ತಿಗೆದಾರರ ಹಿಂದೆ ಯಾರಿದ್ದಾರೆ, ಯಾರ ಕುಮ್ಮಕ್ಕಿನಿಂದ ಗುತ್ತಿಗೆದಾರರು ಅರೋಪಗಳನ್ನು ಮಾಡುತ್ತಿದ್ದಾರೆ ಅಂತ ಚೆನ್ನಾಗಿ ಗೊತ್ತಿದೆ. ಅವರು (ಗುತ್ತಿಗೆದಾರರು) ರಾಜ್ಯಪಾಲರಿಗಾದರೂ ದೂರು ನೀಡಲಿ, ಪ್ರಧಾನ ಮಂತ್ರಿಗೂ ದೂರು ನೀಡಲಿ, ತನಗೇನೂ ಅಭ್ಯಂತರವಿಲ್ಲ ಎಂದು ಹೇಳಿದರು. ಸಾವಿರ ಕೋಟಿ ಮೊತ್ತದ ಕಾಮಗಾರಿಯನ್ನು ಒಂದು ತಿಂಗಳಲ್ಲಿ ಮಾಡಿದವರಿಗೆ ಬಿಲ್ ರಿಲೀಸ್ ಮಾಡಲಾಗುತ್ತಾ ಎಂದು ಕೇಳಿದ ಶಿವಕುಮಾರ್, ಗುತ್ತಿಗೆದಾರರು ಸಂಬಂಧಪಟ್ಟ ಅಧಿಕಾರಿಯಿಂದ ಕಾಮಗಾರಿ ಸಮರ್ಪಕವಾಗಿ ಅಗಿದೆ ಅಂತ ಪ್ರಮಾಣ ಪತ್ರ ತರಲಿ, ಬಿಲ್ ತಾನಾಗೇ ರಿಲೀಸ್ ಆಗುತ್ತದೆ, ನಿಯಮಾವಳಿಗಳನ್ನು ಗಾಳಿಗೆ ತೂರಿ ಬಿಲ್ ಗಳನ್ನು ರಿಲೀಸ್ ಮಾಡೋದಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on